ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಅಮಲಾಪೌಲ್ ಕೂಡ ಒಬ್ಬರು. ಈ ಬಹುಭಾಷಾ ನಟಿ, ‘ಹೆಬ್ಬುಲಿ’ ಸಿನಿಮಾದಲ್ಲಿ ನಟ ಸುದೀಪ್ ಜೊತೆ ಜೋಡಿಯಾಗಿ ನಟಿಸಿದ್ದರು. ಇವರು ತಮಿಳಿನ ‘ಅಡೈ’ ಸಿನಿಮಾದಲ್ಲಿ ಅತ್ಯಾಚಾರಕ್ಕೊಳಗಾದ ಯುವತಿ ಪಾತ್ರಕ್ಕಾಗಿ ಬೆನ್ನಿನ ಭಾಗ ನಗ್ನವಾಗಿ ಕಾಣಿಸಿಕೊಂಡು ಭಾರಿ ಸುದ್ದಿಯಾಗಿದ್ದರು.
ಈಗ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಿಕಿನಿ ತೊಟ್ಟಿರುವ ತಮ್ಮ ಫೋಟೊಗಳನ್ನು ಅಮಲಾ ಹಂಚಿಕೊಂಡಿದ್ದು, ವೈರಲ್ ಆಗಿವೆ.ಈ ಫೋಟೊಗಳ ಕೆಳಗೆ ‘ಕೆಲ ವ್ಯಕ್ತಿಗಳು ಶಾಂತಿಯಿಂದ ಬದುಕುವ ಬದಲಾಗಿ ಯುದ್ಧ ಮಾಡುತ್ತಾ ತಮ್ಮ ಅಮೂಲ್ಯ ಕ್ಷಣಗಳನ್ನು ಕಳೆದು ಬಿಡುತ್ತಾರೆ. ಶಾಂತಿಯಿಂದ ಯಾಕೆ ಬದುಕಬಾರದು?’ ಎಂದು ಬರೆದುಕೊಂಡಿದ್ದಾರೆ. ವೈರಲ್ ಆದ ಈ ಫೋಟೊಗಳಿಗೆ ನೆಟಿಜನ್ನರಿಂದ ಭಾರಿ ಮೆಚ್ಚುಗೆ, ಪ್ರತಿಕ್ರಿಯೆಗಳು ಬಂದಿವೆ.
ಬಾಲಿವುಡ್ನ ಹಿರಿಯ ನಿರ್ದೇಶಕ ಮಹೇಶ್ ಭಟ್ ಅವರು ನಿರ್ಮಿಸುತ್ತಿರುವ ತಮ್ಮ ಒಂದು ಕಾಲದ ಗೆಳತಿ ಪರ್ವೀನ್ ಬಾಬಿ ಜೀವನ ಕತೆ ಆಧಾರಿತ ವೆಬ್ಸಿರೀಸ್ನಲ್ಲಿ ಅಮಲಾ ಪೌಲ್, ಪರ್ವೀನ್ ಬಾಬಿ ಪಾತ್ರ ನಿರ್ವಹಿಸಲಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.