ಹೈದರಾಬಾದ್: ಕಾಲ್ತುಳಿತ ವಿವಾದದ ನಡುವೆ ಪುಷ್ಪ–2 ಚಿತ್ರದ 'ದಮ್ಮಿದ್ರೆ ನನ್ನನ್ನು ಹಿಡಿಯಿರಿ' (Dammunte Pattukora) ಹಾಡು ಟೀಕೆಗೆ ಗುರಿಯಾಗಿತ್ತು. ಹೀಗಾಗಿ ಚಿತ್ರ ತಂಡ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಯೂಟ್ಯೂಬ್‌ನಿಂದ ಈ ಹಾಡನ್ನು ತೆಗೆದುಹಾಕಿದೆ.
ಈ ಬಗ್ಗೆ ಸುದ್ದಿಸಂಸ್ಥೆ ‘ಎನ್‌ಡಿ ಟಿವಿ’ ವರದಿ ಮಾಡಿದೆ.
ಅಲ್ಲು ಅರ್ಜುನ್ ಹಾಡಿರುವ 'Dammunte Pattukora' ಹಾಡು ಡಿಸೆಂಬರ್ 24 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು. ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಣೆದಾರರ ಸಿಂಡಿಕೇಟ್ನ ಮುಖಂಡ. ಚಿತ್ರದಲ್ಲಿ ಅಲ್ಲು ಅರ್ಜುನ್ ಅನ್ನು ಹಿಡಿಯಲು ಪೊಲೀಸ್ (ಶೆಖಾವತ್) ಒಬ್ಬ ಬಹಳ ಪ್ರಯತ್ನ ಪಡುತ್ತಿರುತ್ತಾನೆ.
ದೃಶ್ಯವೊಂದರಲ್ಲಿ ಶೆಖಾವತ್ಗೆ ಸವಾಲು ಹಾಕುವ ಪುಷ್ಪ (ಅಲ್ಲು ಅರ್ಜುನ್) ‘ದಮ್ಮಿದ್ರೆ ನನ್ನನ್ನು ಹಿಡಿಯಿರಿ (Dammunte Pattukora) ಶೆಖಾವತ್ ’(ಫಹದ್ ಫಾಸಿಲ್) ಎಂದು ಹಾಡು ಹೇಳುತ್ತಾ ಸವಾಲು ಹಾಕುತ್ತಾನೆ. ಈ ಸಾಲು ಟೀಕೆಗೆ ಗುರಿಯಾಗಿತ್ತು. ಪೊಲೀಸರನ್ನು ಗೇಲಿ ಮಾಡಲಾಗಿದೆ ಎಂದೂ ಹೇಳಲಾಗಿತ್ತು. ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಬಂಧನ ಹಾಗೂ ನಂತರದ ಬೆಳವಣಿಗೆಗಳ ನಡುವೆ ಚಿತ್ರ ತಂಡ ಈ ಹಾಡಿಗೆ ಕತ್ತರಿ ಹಾಕಿದೆ.
ಇನ್ನು ವಿವಾದಗಳ ನಡುವೆಯೇ ಪುಷ್ಪ 2 ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಡಿಸೆಂಬರ್ 5 ರಂದು ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 21 ದಿನಗಳನ್ನು ಪೂರೈಸಿದೆ. ಸದ್ಯ ಭಾರತದಲ್ಲಿ ₹1100 ಕೋಟಿ ಗಳಿಕೆ ಮಾಡಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.