ADVERTISEMENT

‘ಶೋಲೆ’ ಟಿಕೆಟ್‌ ಚಿತ್ರ ಹಂಚಿಕೊಂಡ ಬಾಲಿವುಡ್ ಬಿಗ್‌ ಬಿ ಅಮಿತಾಭ್ ಬಚ್ಚನ್

ಪಿಟಿಐ
Published 28 ಜುಲೈ 2025, 6:48 IST
Last Updated 28 ಜುಲೈ 2025, 6:48 IST
<div class="paragraphs"><p>ಅಮಿತಾಭ್ ಬಚ್ಚನ್‌ ಹಂಚಿಕೊಂಡ ಫೋಟೊ</p></div>

ಅಮಿತಾಭ್ ಬಚ್ಚನ್‌ ಹಂಚಿಕೊಂಡ ಫೋಟೊ

   

ನವದೆಹಲಿ: ಬಾಲಿವುಡ್‌ನ ಬಿಗ್‌ ಬಿ ಅಮಿತಾಭ್ ಬಚ್ಚನ್‌ ಅವರು ತಮ್ಮ ‘ಶೋಲೆ’ ಸಿನಿಮಾದ ಟಿಕೆಟ್‌ ಅನ್ನು ಖಾಸಗಿ ಬ್ಲಾಗ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

‘ಆಗ ಸಿನಿಮಾ ಟಿಕೆಟ್‌ ಬೆಲೆ ₹20 ಆಗಿತ್ತು. ಇದನ್ನು ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ಥಿಯೇಟರ್ ಹಾಲ್‌ಗಳಲ್ಲಿ ಸೋಡಾ ಥರದ ಪಾನೀಯದ ಬೆಲೆ ಇಷ್ಟೇ ಆಗಿದೆ ಎನ್ನುತ್ತಾರೆ ಅದು ಸತ್ಯವೇ?’ ಎಂಬುದಾಗಿ ಬರೆದುಕೊಂಡಿದ್ದಾರೆ.

ADVERTISEMENT

1975ರ ಆಗಸ್ಟ್‌ 15ರಂದು ತೆರೆಕಂಡಿದ್ದ ಸಿನಿಮಾಕ್ಕೆ ಈಗ 50 ವರ್ಷ. ರಮೇಶ್‌ ಸಿಪ್ಪಿ ನಿರ್ದೇಶನದ ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್‌ ಮತ್ತು ಧರ್ಮೇಂದ್ರ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬ್ಲಾಕ್‌ಬಾಸ್ಟರ್‌ ಕೂಡ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.