ADVERTISEMENT

ಆ್ಯಮಿ ನಿಶ್ಚಿತಾರ್ಥ

​ಪ್ರಜಾವಾಣಿ ವಾರ್ತೆ
Published 7 ಮೇ 2019, 19:30 IST
Last Updated 7 ಮೇ 2019, 19:30 IST
ಆ್ಯಮಿ ಜಾಕ್ಸನ್
ಆ್ಯಮಿ ಜಾಕ್ಸನ್   

ಇತ್ತೀಚೆಗಷ್ಟೇ ತಾನು ಗರ್ಭಿಣಿ ಎಂದು ಸುದ್ದಿಯ ಕೇಂದ್ರವಾಗಿದ್ದ ನಟಿ ಆ್ಯಮಿ ಜಾಕ್ಸನ್‌ ಈಚೆಗಷ್ಟೆ ಲಂಡನ್‌ನಲ್ಲಿ ಗೆಳೆಯ ಜಾರ್ಜ್ ಪನಾಯಿಟೊ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ವಿಡಿಯೊ ಮತ್ತು ಫೋಟೊಗಳನ್ನು ಆ್ಯಮಿ ಹಂಚಿಕೊಂಡಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಪ್ತರನ್ನಷ್ಟೇ ಆಹ್ವಾನಿಸಿದ್ದ ಆ್ಯಮಿ, ಜಾರ್ಜ್ ಜತೆಗೆ ಡಾನ್ಸ್ ಮಾಡಿರುವ ವಿಡಿಯೊ ವೈರಲ್ ಆಗಿದೆ. ‘ಗ್ರೀಕ್ ಸಂಪ್ರದಾಯದ ರೀತಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡೆವು. ಈ ಸಮಾರಂಭವನ್ನು ವಿಶೇಷವನ್ನಾಗಿ ರೂಪಿಸಿದ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ಧನ್ಯವಾದಗಳು. ಎಲ್ಲರಿಗೂ ತುಂಬಾ ಪ್ರೀತಿ’ ಎಂದು ಆ್ಯಮಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ನಿಶ್ಚಿತಾರ್ಥದಲ್ಲಿ ಜಾರ್ಜ್ವೈಟ್ ಸೂಟ್‌ನಲ್ಲಿ ಕಂಗೊಳಿಸುತ್ತಿದ್ದರೆ, ಆ್ಯಮಿ ಕಪ್ಪು ಮತ್ತು ಬಿಳುಪಿನ ಉಡುಪಿನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.