ADVERTISEMENT

ಅನನ್ಯಾ ಪಾಂಡೆ ಮೈ ಏರಿದ ಚಿಟ್ಟೆ! ಪರಿಸರ ಪಾಠ ಹೇಳಿದ ನಟಿ

ಚಿಟ್ಟೆ ಟಾಪ್ ಮೂಲಕ ಲೈಗರ್ ಖ್ಯಾತಿ ಅನನ್ಯಾ ಪಾಂಡೆ ತನ್ನ ಅಭಿಮಾನಿಗಳಿಗೆ ಪರಿಸರ ಪಾಠ ಹೇಳಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2024, 6:51 IST
Last Updated 9 ಫೆಬ್ರುವರಿ 2024, 6:51 IST
<div class="paragraphs"><p>ಅನನ್ಯಾ</p></div>

ಅನನ್ಯಾ

   

ಬೆಂಗಳೂರು: ಲೈಗರ್ ಖ್ಯಾತಿಯ ನಟಿ ಅನನ್ಯಾ ಪಾಂಡೆಗೆ ಸಿನಿಮಾಗಳಲ್ಲಿ ಅವಕಾಶ ಕಡಿಮೆ ಇದ್ದರೂ ಮಾಡೆಲಿಂಗ್ ಮೂಲಕ ಸದಾ ಬ್ಯುಜಿ ಇರುತ್ತಾರೆ.

ADVERTISEMENT

ಈ ನಟಿ ಇದೀಗ ಮಾಡೆಲಿಂಗ್ ಮೂಲಕವೇ ತನ್ನ ಅಭಿಮಾನಿಗಳಿಗೆ ಪರಿಸರ ಪಾಠ ಹೇಳಿದ್ದಾರೆ.

ಇತ್ತೀಚಿಗೆ ಪ್ಯಾರಿಸ್‌ನಲ್ಲಿ ನಡೆದ Paris Couture Week ನಲ್ಲಿ ಭಾಗವಹಿಸಿದ್ದ ಅನನ್ಯಾ, ಆಕರ್ಷಕ ಉಡುಪು ಧರಿಸಿ ಗಮನ ಸೆಳೆದಿದ್ದಾರೆ. ವಿಶೇಷವೆಂದರೆ ಅವರು ಕಪ್ಪು ಸ್ಕರ್ಟ್ ನಲ್ಲಿ ಚಿಟ್ಟೆ ಮಾದರಿಯ ಟಾಪ್ ಧರಿಸಿದ್ದರು.

ಈ ಮೂಲಕವೇ ಅವರು ಪರಿಸರ ಪಾಠ ಹೇಳಿದ್ದಾರೆ. ‘ಇದು ಸೂಪರ್ ಹೀರೊ ಕಲ್ಪನೆ. ನಾವು ಕೀಟಗಳೊಂದಿಗೂ ಬದುಕುವ ಅವಶ್ಯಕತೆ ಇದೆ ಎಂಬುದನ್ನು ನಮ್ಮ ಡಿಸೈನರ್ ತೋರಿಸಿಕೊಟ್ಟರು. ಈ ಭೂಮಿಯಲ್ಲಿ ಕೇವಲ ಮನುಷ್ಯ ಬಾಳಬೇಕೆಂದುಕೊಂಡು ಕೀಟಗಳ, ಸರಿಸೃಪಗಳ ಮುಂತಾದ ಪ್ರಾಣಿ ಪಕ್ಷಿಗಳ ಆವಾಸಸ್ಥಾನಗಳನ್ನು ನಾಶಪಡಿಸುತ್ತಿದ್ದಾನೆ ಇದು ತುಂಬಾ ದುಃಖಕರ ಸಂಗತಿ' ಎಂದು ಬೇಸರ ವ್ಯಕ್ತಪಡಿಸಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಅಂದಹಾಗೇ ಈ ಆಕರ್ಷಕ ಉಡುಪನ್ನು ಡಿಸೈನ್ ಮಾಡಿದ್ದು ಖ್ಯಾತ ಡಿಸೈನರ್ ರಾಹುಲ್ ಮಿಶ್ರಾ ಅವರು. ಸದ್ಯ ಅನನ್ಯಾ ‘ಕಂಟ್ರೋಲ್’ ಎಂಬ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

ಅನನ್ಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.