ADVERTISEMENT

ಅನಿಲ್ ಕಪೂರ್, ಖುಷ್ಬೂ ನಟನೆಯ ಸುಬೇದರ್ ಚಿತ್ರದ ಟ್ರೇಲರ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2026, 12:45 IST
Last Updated 25 ಫೆಬ್ರುವರಿ 2026, 12:45 IST
   

ಅನಿಲ್ ಕಪೂರ್ ನಟನೆಯ  ‘ಸುಬೇದರ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರವು ವಿಶ್ವದಾದ್ಯಂತ ಮಾ.5ರಂದು ತೆರೆಕಾಣಲಿದೆ. 

ಈ ಚಿತ್ರವು ಕ್ರೈಂ, ಥ್ರಿಲ್ಲರ್ ಕಥೆಯನ್ನು ಆಧರಿಸಿದೆ. 69 ವರ್ಷದ ಅನಿಲ್ ಕಪೂರ್ ಅವರು ಅರ್ಜುನ್ ಮೌರ್ಯ ಎಂಬ ನಿವೃತ್ತ ಸೇನಾಧಿಕಾರಿ (ಸುಬೇದಾರ್) ಪಾತ್ರದಲ್ಲಿ ನಟಿಸಿದ್ದಾರೆ. 

ಈ ಚಿತ್ರದ ಇನ್ನೊಂದು ವಿಶೇಷ ಎಂದರೆ, ಖುಷ್ಬೂ ಹಾಗೂ ಅನಿಲ್ ಕಪೂರ್ 'ಮೇರಿ ಜಂಗ್' ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಮೂಲಕ ಸುಮಾರು ನಾಲ್ಕು ದಶಕಗಳ ನಂತರ ಈ ಜೋಡಿ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

ADVERTISEMENT

‘ಸುಬೇದರ್’ ಚಿತ್ರವನ್ನು ಸುರೇಶ್ ತ್ರಿವೇಣಿ ನಿರ್ದೇಶನ ಮಾಡಿದ್ದು, ಅನಿಲ್ ಕಪೂರ್ ಫಿಲ್ಮ್ ನಿರ್ಮಾಣ ಮಾಡಿದೆ. ಈ ಚಿತ್ರದಲ್ಲಿ ರಾಧಿಕಾ ಮದನ್, ಸೌರಭ್ ಶುಕ್ಲಾ, ಆದಿತ್ಯ ರಾವಲ್ ಮತ್ತು ಫೈಸಲ್ ಮಲಿಕ್ ಅವರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.