ADVERTISEMENT

ಯಾವ ನಿಯಮ ಉಲ್ಲಂಘಿಸಿದ್ದಕ್ಕೆ ‘ಲಾಕ್‌’ ಶಿಕ್ಷೆ: ಎಕ್ಸ್‌ಗೆ ನಟ ಅನುಪಮ್ ಖೇರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2025, 11:00 IST
Last Updated 24 ಫೆಬ್ರುವರಿ 2025, 11:00 IST
<div class="paragraphs"><p>ಅನುಪಮ್ ಖೇರ್</p></div>

ಅನುಪಮ್ ಖೇರ್

   

ಚಿತ್ರ: ಇನ್‌ಸ್ಟಾಗ್ರಾಂ

ಮುಂಬೈ: ತಮ್ಮ ಎಕ್ಸ್‌ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದ ಬಗ್ಗೆ ಬಾಲಿವುಡ್ ನಟ ಅನುಪಮ್ ಖೇರ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ನನ್ನ ಯಾವ ಪೋಸ್ಟ್ ನಿಮ್ಮ(ಎಕ್ಸ್‌) ನಿಯಮವನ್ನು ಉಲ್ಲಂಘಿಸಿದೆ ತಿಳಿಸಿ ಎಂದು ‘ಎಕ್ಸ್‌’ನಲ್ಲಿಯೇ ಕೇಳಿದ್ದಾರೆ.

ADVERTISEMENT

ನನ್ನ ಖಾತೆ ಲಾಕ್‌ ಆಗಿರುವ ಬಗ್ಗೆ ಸೂಚನೆ ಬಂದಿರುವುದು ಕಂಡು ಆಶ್ಚರ್ಯವಾಯಿತು ಎಂದಿರುವ ಅವರು, ಯಾವಾಗಿನಿಂದ ಹೀಗಾಯಿತು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಹೇಳಿದ್ದಾರೆ.

‘ಈಗ ನನ್ನ ಖಾತೆಯನ್ನು ಮರುಸ್ಥಾಪಿಸಲಾಗಿದ್ದರೂ ‘ಲಾಕ್‌’ ಆಗಿರುವ ಬಗ್ಗೆ ನನಗೆ ಉತ್ತರಬೇಕಿದೆ. 2007ರಿಂದ ನಾನು ಎಕ್ಸ್‌ ಖಾತೆ ಬಳಸುತ್ತಿದ್ದೇನೆ. ಆಗಿನಿಂದ ಸಾಮಾಜಿಕ ಮಾಧ್ಯಮ ವೇದಿಕೆಯ ನಿಯಮಗಳು ಮತ್ತು ಹಕ್ಕುಸ್ವಾಮ್ಯದ ಬಗ್ಗೆ ಎಚ್ಚರ ವಹಿಸುತ್ತಾ ಬಂದಿದ್ದೇನೆ. ನನ್ನ ಯಾವ ಪೋಸ್ಟ್ ನಿಮ್ಮ ನಿಯಮವನ್ನು ಉಲ್ಲಂಘಿಸಿದೆ ಎಂದು ತಿಳಿದುಕೊಳ್ಳುವ ಇಂಗಿತವಿದೆ’ ಎಂದು ಅನುಪಮ್ ಖೇರ್ ಅವರು ‘ಎಕ್ಸ್‌’ ಒಡೆಯ ಎಲಾನ್‌ ಮಸ್ಕ್‌ ಅವರನ್ನು ಟ್ಯಾಗ್ ಮಾಡಿದ್ದಾರೆ.

ಪೋಸ್ಟ್ ಜೊತೆಗೆ ಖಾತೆ ಲಾಕ್‌ ಆಗಿದೆ ಎಂದು ಹೇಳುವ ಸಂದೇಶದ ಸ್ಕ್ರೀನ್‌ ಶಾಟ್‌ ಫೋಟೋವನ್ನು ಲಗತ್ತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.