ADVERTISEMENT

ದಯವಿಟ್ಟು ನಿರ್ಲಕ್ಷಿಸಿ: ಅಭಿಮಾನಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ ಅನುಪಮ್ ಖೇರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2026, 11:33 IST
Last Updated 11 ಫೆಬ್ರುವರಿ 2026, 11:33 IST
<div class="paragraphs"><p>ಅನುಪಮ್ ಖೇರ್</p></div>

ಅನುಪಮ್ ಖೇರ್

   

ಚಿತ್ರ: ಇನ್‌ಸ್ಟಾಗ್ರಾಂ

ಬಾಲಿವುಡ್ ನಟ ಅನುಪಮ್ ಖೇರ್ ಅವರು ಆಗಾಗ ತಮ್ಮ ಹೊಸ ಯೋಜನೆಗಳು ಮತ್ತು ಆಲೋಚನೆಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಇರುತ್ತಾರೆ. ಆದರೆ ಈ ಬಾರಿ ತಮ್ಮ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿದ್ದವರ ವಿರುದ್ಧ ಕಿಡಿ ಕಾರಿದ್ದಾರೆ.

ADVERTISEMENT

ಅನೇಕರು ಅವರ ಹೆಸರನ್ನು ಬಳಸಿಕೊಂಡು ನಕಲಿ ಸಾಮಾಜಿಕ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ ಎಂಬ ವಿಚಾರ ನಟ ಅನುಪಮ್ ಖೇರ್‌ಗೆ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳಿಗೆ ವಿಡಿಯೊ ಮೂಲಕ ಎಚ್ಚರಿಕೆ ನೀಡಿದ್ದಾರೆ.

‘ಕೆಲ ವಂಚಕರು ನನ್ನ ಹೆಸರನ್ನು ಹೇಳಿಕೊಂಡು, ಖಾತೆಯಲ್ಲಿ ನನ್ನ ಫೋಟೊಗಳು ಮತ್ತು ವಿಡಿಯೊಗಳನ್ನು ಹಾಕಿ ಫಾಲೋ ಮಾಡಿ ಎಂದು ಅನೇಕರಿಗೆ ಸಂದೇಶ ಕಳಿಸುತ್ತಿದ್ದಾರೆ. ನನ್ನ ಬಳಿ ಇದೊಂದೆ ಇನ್‌ಸ್ಟಾಗ್ರಾಂ ಖಾತೆ ಇದೆ. ನನ್ನ ಹೆಸರಿನ ಬೇರೆ ಯಾವುದೇ ಖಾತೆಯನ್ನು ಅನುಸರಿಸಬೇಡಿ. ದಯವಿಟ್ಟು ಅಂತಹ ಖಾತೆಗಳನ್ನು ನಿರ್ಲಕ್ಷಿಸಿ’ ಎಂದು ಅಭಿಮಾನಿಗಳಿಗೆ ಅಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.