ADVERTISEMENT

ಅನುಷ್ಕಾ ಭಾವನಾತ್ಮಕ ಪೋಸ್ಟ್‌ಗೆ ಕೊಹ್ಲಿಯ ಹೃದಯಸ್ಪರ್ಶಿ ಪ್ರತಿಕ್ರಿಯೆ... ಏನದು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಸೆಪ್ಟೆಂಬರ್ 2020, 14:37 IST
Last Updated 13 ಸೆಪ್ಟೆಂಬರ್ 2020, 14:37 IST
ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್‌ ಕೊಹ್ಲಿ
ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್‌ ಕೊಹ್ಲಿ   
""

ಮುಂಬೈ: ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಇಂದು ಅನುಷ್ಕಾ ಶರ್ಮಾ ಅವರು ತಮ್ಮ ಸುಂದರ ಚಿತ್ರವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಮುಂದಿನ ವರ್ಷದ ಮೊದಲ ತಿಂಗಳು ಮಾತೃತ್ವದ ಹೊಸ ಅಧ್ಯಾಯಕ್ಕೆ ಅಣಿಯಾಗುತ್ತಿರುವ ಅನುಷ್ಕಾ ಚಿತ್ರವೀಗ ಅವರ ಅಭಿಮಾನಿಗಳಲ್ಲಿ ಭಾವತೀವ್ರತೆಯನ್ನು ಹೆಚ್ಚಿಸಿದೆ.

ಅನುಷ್ಕಾ ಹಂಚಿಕೊಂಡಿರುವ ಚಿತ್ರಕ್ಕೆವಿರಾಟ್‌ ಕೊಹ್ಲಿ ಹೃದಯಸ್ಪರ್ಶಿ ಕಾಮೆಂಟ್‌ ಮಾಡಿದ್ದಾರೆ. ಇದಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ADVERTISEMENT

'ನಿಮ್ಮೊಳಗೆ ಜೀವವೊಂದರ ಸೃಷ್ಟಿಯನ್ನು ಅನುಭವಿಸುವುದಕ್ಕಿಂತ ನೈಜ ಮತ್ತು ವಿನಮ್ರವಾದದ್ದು ಮತ್ತೊಂದಿಲ್ಲ. ನಿಮ್ಮ ನಿಯಂತ್ರಣದಲ್ಲಿ ಇಲ್ಲದೇ ಇರುವುದು. ಇದು ನಿಜವಾಗಿಯೂ ಏನು?' ಎಂದು ತಾವು ಹಂಚಿಕೊಂಡಿರುವ ಚಿತ್ರದ ಜೊತೆ ಅನುಷ್ಕಾ ಬರೆದುಕೊಂಡಿದ್ದಾರೆ.

ಅನುಷ್ಕಾ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯನ್ನು ನೀಡಿರುವ ಪತಿ ವಿರಾಟ್‌ ಕೊಹ್ಲಿ, 'ನನ್ನ ಇಡೀ ಪ್ರಪಂಚ ಒಂದೇ ಚೌಕಟ್ಟಿನಲ್ಲಿ' ಎಂದು ಹೃದಯದ ಎಮೋಜಿಯನ್ನು ಅಂಟಿಸುವ ಮೂಲಕ ಕಾಮೆಂಟ್‌ ಮಾಡಿದ್ದಾರೆ.

ಇದಕ್ಕೆ ಬಾಲಿವುಡ್‌ ಸೆಲೆಬ್ರಿಟಿಗಳಾದ ಮೌನಿ ರಾಯ್, ಜರೀನ್ ಖಾನ್, ತಾಹಿರಾ ಕಶ್ಯಪ್, ದಿಯಾ ಮಿರ್ಜಾ ಸಹ ಹೃದಯದ ಎಮೋಜಿಗಳನ್ನು ಅಂಟಿಸಿ ಕಾಮೆಂಟ್ ಮಾಡುವ ಮೂಲಕ ದಂಪತಿಗಳಿಗೆ ಶುಭಾಶಯ ಕೋರಿದ್ದಾರೆ.

ಅನುಷ್ಕಾ ಗರ್ಭಿಣಿಯಾಗಿರುವ ಮಾಹಿತಿಯನ್ನು ಪತಿ ವಿರಾಟ್‌ ಕೊಹ್ಲಿ ಕಳೆದ ತಿಂಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.