ನಟಿ ಅನುಷ್ಕಾ ಶರ್ಮಾ ಸಂಬಂಧದಲ್ಲಿ ಉತ್ತಮ ಬಾಂಧವ್ಯ ಮೂಡುವ ಹಾಗೂ ಸಂಬಂಧದ ಯಶಸ್ಸಿಗೆ ಕಾರಣವಾಗುವ ಪ್ರೇರಕ ಅಂಶಗಳ ಕುರಿತು ಮಾತನಾಡಿದ್ದಾರೆ.
ಜೂನ್ 4 ರಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಶೋತ್ನರ ಸಂವಾದ ಏರ್ಪಡಿಸಿದ್ದರು ಈ ನಟಿ. ಆಗ ತಮ್ಮ ಹಾಗೂ ವಿರಾಟ್ ಕೊಹ್ಲಿ ನಡುವೆ ನಡೆಯುವ ಹಾಸ್ಯ ಘಟನೆಗಳು ಹಾಗೂ ಸಾಂಸಾರಿಕ ಜೀವನಕ್ಕೆ ಸಂಬಂಧಿಸಿದ ಅರ್ಥಪೂರ್ಣ ಸಲಹೆಗಳನ್ನು ಹಂಚಿಕೊಂಡಿದ್ದಾರೆ ಅನುಷ್ಕಾ.
ಅದೇ ವೇಳೆ ಸಂಬಂಧದ ಯಶಸ್ಸಿನ ಬಗ್ಗೆಯೂ ಮಾತನಾಡಿದ್ದಾರೆ ಅನುಷ್ಕಾ ‘ಪ್ರೀತಿ ಎಂದರೆ ಎಲ್ಲವನ್ನೂ ಒಪ್ಪಿಕೊಳ್ಳುವುದು, ಪ್ರೀತಿಯಲ್ಲಿ ನಂಬಿಕೆ ಬಹಳ ಮುಖ್ಯ. ಉತ್ತಮ ಸಂಬಂಧ ಎಂದರೆ ಅದು ಬದ್ಧತೆ. ಒಳ್ಳೆಯ ಸಂದರ್ಭ ಅಥವಾ ಕೆಟ್ಟ ಸಂದರ್ಭ ಯಾವುದೇ ಇರಲಿ ಜೊತೆಯಾಗಿ ಇರುತ್ತೇವೆ ಎಂಬ ದೃಢಸಂಕಲ್ಪ ಇರಬೇಕು. ಮನುಷ್ಯ ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಆದರೆ ಅದನ್ನು ಅರ್ಥಮಾಡಿಕೊಂಡು ಮುಂದೆ ಸಾಗುವುದರಿಂದ ಮನುಷ್ಯನ ಸಾಮರ್ಥ್ಯ ತಿಳಿಯಬಹುದು’ ಎಂದಿದ್ದಾರೆ.
ಕೇರಂ, ಚೆಸ್‌ನಂತಹ ಬೋರ್ಡ್ ಗೇಮ್‌ಗಳಲ್ಲಿ ಗಂಡ ವಿರಾಟ್ ಕೊಹ್ಲಿ ಅವರನ್ನು ಸೋಲಿಸುವ ಮೂಲಕ ಸಂತೋಷ ಪಡುತ್ತಾರಂತೆ ಅನುಷ್ಕಾ.
ಆ ಸಂವಾದದಲ್ಲಿ ವ್ಯಕ್ತಿಯೊಬ್ಬರು ನೀವು ಕೊಹ್ಲಿ ಅವರಿಗೆ ಯಾವ ಸಂದರ್ಭದಲ್ಲಿ ಕಿರಿಕಿರಿ ಮಾಡುತ್ತೀರಿ ಎಂಬ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಅನುಷ್ಕಾ ‘ಒಂದು ವೇಳೆ ನಾನು ಬೋರ್ಡ್ ಆಟಗಳಲ್ಲಿ ಅವರನ್ನು ಸೋಲಿಸಿದಾಗ ಅವರಿಗೆ ಕಿರಿಕಿರಿ ಆಗುತ್ತದೆ. ಅವರಿಗೆ ಯಾವುದರಲ್ಲೂ ಸೋಲುವುದು ಇಷ್ಟವಿಲ್ಲ’ ಎಂದಿದ್ದಾರೆ.
ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ 2017ರಲ್ಲಿ ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.