ADVERTISEMENT

ವಿಚ್ಛೇದನ ಪೋಸ್ಟ್‌ಗೆ ಹ್ಯಾಶ್‌ಟ್ಯಾಗ್ ಬಳಕೆ: ಟ್ರೋಲ್‌ ಆದ ಎ.ಆರ್‌.ರೆಹಮಾನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ನವೆಂಬರ್ 2024, 13:43 IST
Last Updated 20 ನವೆಂಬರ್ 2024, 13:43 IST
   

ಬೆಂಗಳೂರು: ವಿಚ್ಛೇದನ ಪೋಸ್ಟ್‌ನಲ್ಲಿ ಹ್ಯಾಶ್‌ಟ್ಯಾಗ್ ಬಳಸಿರುವುದಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‌ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟ್ರೋಲ್‌ಗೆ ಒಳಗಾಗಿದ್ದಾರೆ.

ಮದುವೆಯಾದ 29 ವರ್ಷಗಳ ನಂತರ ಬೇರೆಯಾಗಿರುವುದಾಗಿ ಸಂಗೀತ ಮಾಂತ್ರಿಕ ಎ.ಆರ್‌. ರೆಹಮಾನ್‌ ಹಾಗೂ ಅವರ ಪತ್ನಿ ಸಾಯಿರಾ ಬಾನು ಅವರು ಮಂಗಳವಾರ ಘೋಷಿಸಿದ್ದರು. ಇಬ್ಬರ ಪರವಾಗಿ ಹೇಳಿಕೆ ಬಿಡುಗಡೆ ಮಾಡಿದ್ದ ವಕೀಲೆ ವಂದನಾ ಶಾ, ಸಂಬಂಧದಲ್ಲಿ ಭಾವನಾತ್ಮಕ ಒತ್ತಡಗಳು ಹೆಚ್ಚಾದ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿಸಿದ್ದರು.

ಈ ವಿಚಾರವಾಗಿ ಬುಧವಾರ ವೈಯಕ್ತಿಕ ಪೋಸ್ಟ್ ಹಂಚಿಕೊಂಡಿದ್ದ ರೆಹಮಾನ್‌, ಖಾಸಗಿತನವನ್ನು ಗೌರವಿಸಿ ಎಂದು ವಿನಂತಿ ಮಾಡಿಕೊಂಡಿದ್ದರು. ಪೋಸ್ಟ್‌ನ ಕೊನೆಯಲ್ಲಿ #Arrsairaabreakup ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದರು. ವಿಚ್ಛೇದನ ಪೋಸ್ಟ್‌ನಲ್ಲಿಯೂ ಹ್ಯಾಶ್‌ಟ್ಯಾಗ್ ಬಳಸಿರುವುದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.

ADVERTISEMENT

‘ಈ ಪರಿಸ್ಥಿತಿಗೆ ಹ್ಯಾಶ್‌ಟ್ಯಾಗ್ ರಚಿಸಿದ ವ್ಯಕ್ತಿ ಯಾರು? ಮೊದಲು ಆತನನ್ನು ತೆಗೆದುಹಾಕಿ ತಲೈವಾ’ ಎಂದು ಎಕ್ಸ್‌ ಬಳಕೆದಾರರೊಬ್ಬರು ಹೇಳಿದ್ದಾರೆ.

‘ಹ್ಯಾಶ್‌ಟ್ಯಾಗ್ ಬಳಸಿದ್ದಕ್ಕಾಗಿ ಧನ್ಯವಾದಗಳು... ಎಕ್ಸ್‌ನ ಹೊಸ ನಿಯಮದ ಪ್ರಕಾರ ಇದು ನಿಮಗೆ ಸಂಪೂರ್ಣ ಗೌಪತ್ಯೆಯನ್ನು ನೀಡುತ್ತದೆ’ ಎಂದು ಮತ್ತೊಬ್ಬ ಬಳಕೆದಾರ ಕಾಲೆಳೆದಿದ್ದಾರೆ.

‘ನಿಮ್ಮ ಬ್ರೇಕ್‌ಅಪ್‌ಗಿಂತ ಹ್ಯಾಶ್‌ಟ್ಯಾಗ್‌ ಹೆಚ್ಚು ಮಾತನಾಡುತ್ತಿದೆ’ ಎಂದು ಮತ್ತೊಬ್ಬರು ಲೇವಡಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.