ADVERTISEMENT

ಮಲೈಕಾರನ್ನು ಮದುವೆಯಾಗುವ ಸುಳಿವು ಕೊಟ್ಟ ಅರ್ಜುನ್‌ ಕಪೂರ್‌

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 6:51 IST
Last Updated 18 ಏಪ್ರಿಲ್ 2020, 6:51 IST
ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ
ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ   

ಮುಂಬೈ: ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಯಾವಾಗ ಮದುವೆಯಾಗುತ್ತಾರೆ ಎಂಬ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿರುವ ಅರ್ಜುನ್‌ ಕಪೂರ್‌ ಸದ್ಯ ಲಾಕ್‌ಡೌನ್‌ ಇದೆ ಹೇಗೆ ಮದುವೆಯಾಗಲು ಸಾಧ್ಯ ಎಂದಿದ್ದಾರೆ. ಈ ಸಂಕಷ್ಟ ಮುಗಿದ ಮೇಲೆ ಮದುವೆಯಾಗುವುದು ಖಚಿತ ಎಂದು ಅರ್ಜುನ್‌ ಕಪೂರ್ ಹೇಳಿದ್ದಾರೆ. ಮದುವೆಯ ಬಗೆಗಿನ ಅನುಮಾನಗಳಿಗೆ ಕೊನೆಗೂ ತೆರೆ ಬಿದ್ದಂತಾಗಿದೆ.

ಕೊರೊನಾ ಪೀಡಿತ ಕುಟುಂಬಗಳಿಗೆ ನೆರವಾಗಿ ಎಂದು ಅಭಿಮಾನಿಗಳಿಗೆ ಲೈವ್‌ ವಿಡಿಯೊ ಚಾಟ್‌ನಲ್ಲಿ ಹೇಳುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಮದುವೆ ಯಾವಾಗ? ಎಂದು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ADVERTISEMENT

ವಯಸ್ಸಿನ ಅಂತರವಿದ್ದರೂ ಮಲೈಕಾ ಅರೋರಾ ಅವರನ್ನು ಮದುವೆಯಾಗಲು ಅರ್ಜುನ್ ಕಪೂರ್ ಕುಟುಂಬ ಒಪ್ಪಿಗೆ ಸೂಚಿಸಿದೆ. ಆ ಕಾರಣ ಈ ಜೋಡಿ ಕಳೆದ ಎರಡು ವರ್ಷಗಳಿಂದ ದೇಶವಷ್ಟೇ ಅಲ್ಲ ವಿದೇಶಗಳಲ್ಲೂ ವಿಹರಿಸುತ್ತಿದ್ದು ತಮ್ಮ ಸುತ್ತಾಟದ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದೆ.

ಅಷ್ಟೇ ಅಲ್ಲ, ಅರ್ಜನ್ ಕಪೂರ್ ಕುಟುಂಬಕ್ಕೆ ಹತ್ತಿರವಾದ ಮಲೈಕಾ, ಅವರ ಕುಟುಂಬದ ಶುಭ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಹಾಜರಾಗುತ್ತಿದ್ದರು. ಅಷ್ಟೇ ಅಲ್ಲ ಅರ್ಜುನ್ ಸಹೋದರಿಯರಾದ ಜಾನ್ವಿ ಕಪೂರ್, ಅನ್ಷುಲಾ ಕಪೂರ್, ಖುಷಿ ಕಪೂರ್ ಜತೆಗೂ ಪಾರ್ಟಿಗಳಿಗೆ ತೆರಳುತ್ತಿದ್ದಾರೆ.

46 ವರ್ಷದ ಮಲೈಕಾ ಅರೋರ, ‘ವಿ’ ಚಾನೆಲ್ ಮೂಲಕ ತಮ್ಮ ವೃತ್ತಿಬದುಕನ್ನು ಆರಂಭಿಸಿದವರು. ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಕಾಲೂರಿದ ಮೇಲೆ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್ ಖಾನ್ ಅವರನ್ನು ಇಷ್ಟಪಟ್ಟು ಮದುವೆಯಾಗಿದ್ದರು. 2017ರಲ್ಲಿ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಬಳಿಕ ಅರ್ಜುನ್ ಕಪೂರ್ ಜತೆಗೆ ಒಡನಾಟ ಹೊಂದಿರುವ ಮಲೈಕಾ, ಎರಡು ವರ್ಷಗಳಿಂದ ಅರ್ಜುನ್‌ ಜೊತೆ ಸಹಜೀವನ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.