ADVERTISEMENT

ವಿಜಯ್ ದೇವರಕೊಂಡಗೆ ವಿಲನ್‌ ಆದ ಹಾಲಿವುಡ್‌ ಖ್ಯಾತ ನಟ; ಯಾರು ಆ ಖಳನಾಯಕ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2026, 12:49 IST
Last Updated 27 ಜನವರಿ 2026, 12:49 IST
   

ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಐತಿಹಾಸಿಕ ಘಟನೆ ಆಧಾರಿತ ಸಿನಿಮಾ ‘ರಣಬಾಲಿ’ ಯಲ್ಲಿ ಹಾಲಿವುಡ್‌ ನಟ ‘ಆರ್ನಾಲ್ಡ್ ವೋಸ್ಲೂ‘ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. 

ರಾಹುಲ್ ಸಾಂಕೃತ್ಯಾಯನ್ ನಿರ್ದೇಶನದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ರಣಬಾಲಿ ಸಿನಿಮಾ ಸೆಪ್ಟೆಂಬರ್ 11ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಆರ್ನಾಲ್ಡ್ ವೋಸ್ಲೂ, ಸರ್ ಥಿಯೋಡರ್ ಹೆಕ್ಟರ್ ಎಂಬ ಬ್ರಿಟಿಷ್ ಅಧಿಕಾರಿಯ ಪಾತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಯಾರು ಈ ಆರ್ನಾಲ್ಡ್ ವೋಸ್ಲೂ 

ADVERTISEMENT

ಮೊದಲಿಗೆ ಇವರು 1984ರಲ್ಲಿ ತೆರೆಕಂಡ ‘ಬೋಟೀ ಗಾನ್ ಬಾರ್ಡರ್ ಟೋ‘ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ ‘ದಿ ಮಮ್ಮಿ’ ಮತ್ತು ‘ದಿ ಮಮ್ಮಿ ರಿಟರ್ನ್ಸ್’ ಸಿನಿಮಾದಲ್ಲಿ ಕಳನಾಯಕನ ಪಾತ್ರದಲ್ಲಿ ನಟಿಸುವ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದರು. 'ಹಾರ್ಡ್ ಟಾರ್ಗೆಟ್', 'ಏಜೆಂಟ್ ಕೋಡಿ ಬ್ಯಾಂಕ್ಸ್', 'ಬ್ಲಡ್ ಡೈಮಂಡ್' ಹಾಗೂ  ‘ಸಿಲ್ವರ್ಟನ್ ಸೀಜ್’ ಸೇರಿದಂತೆ ಇತರೆ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾದ ಕಥೆಯೇನು?

1854 ಮತ್ತು 1878ರ ನಡುವೆ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು. ಈ ಅವಧಿಯಲ್ಲಿ ದೇಶದಲ್ಲಿ ಭೀಕರ ಕ್ಷಾಮ ತಲೆದೂರಿ, ದೇಶದಾದ್ಯಂತ ಅಪಾರ ಸಾವು ನೋವು ಉಂಟಾಗುತ್ತದೆ. ಈ ಸಮಯದಲ್ಲಿ ಬ್ರಿಟಿಷರು ಭಾರತವನ್ನು ಲೂಟಿ ಮಾಡುತ್ತಾರೆ. ರಣಬಾಲಿ ಸಿನಿಮಾ ಈ ಘಟನೆಗಳನ್ನು ಆಧಾರಿಸಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.