ADVERTISEMENT

‘ಹಳೆ ಪುರಾಣದ ಕಾಲ ಇದಲ್ಲ’

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 14:50 IST
Last Updated 18 ಫೆಬ್ರುವರಿ 2019, 14:50 IST
ಆಶಿಕಾ ರಂಗನಾಥ್‌
ಆಶಿಕಾ ರಂಗನಾಥ್‌   

‘ಲವ್‌ ಅಟ್‌ ಫಸ್ಟ್‌ ಸೈಟ್‌’ ಎಂದು ನಂಬಿ, ಒಮ್ಮೆ ನೋಡಿದ ತಕ್ಷಣ ಪ್ರೇಮಿಸುವ, ಸೌಂದರ್ಯವೊಂದನ್ನೇ ನಂಬಿ ಮದುವೆಯಾಗುವ ಓಲ್ಡ್‌ ಫ್ಯಾಷನ್‌ ಲವ್‌ ಕಾಲ ಹೊರಟುಹೋಯ್ತು. ಜನ ಈಗ ಪ್ರಾಕ್ಟಿಕಲ್‌ ಆಗಿ ಯೋಚಿಸ್ತಾರೆ. ಈಗ ತಮ್ಮ ಸಂಗಾತಿ ಆಗುವವರು ತಮ್ಮ ಲೈಫ್‌ಸ್ಟೈಲ್‌ಗೆ ಹೊಂದಿಕೆಯಾಗುತ್ತಾರೆಯೇ ಎಂದು ನೋಡುತ್ತಾರೆ. ಸಮಯ ತೆಗೆದುಕೊಳ್ಳುತ್ತಾರೆ. ಡೇಟ್‌ ಮಾಡ್ತಾರೆ. ನಂತರ ಲವ್‌, ರಿಲೇಷನ್‌ಷಿಪ್‌, ಮದ್ವೆ ಅಂತ ಮುಂದುವರಿಯುತ್ತಾರೆ. ನನ್ನ ಪ್ರಕಾರ ಇವೆಲ್ಲ ಒಳ್ಳೆಯದೆ. ಯಾಕೆಂದರೆ ಹೀಗಿದ್ದಾಗ ಪರಸ್ಪರ ತಪ್ಪು ಕಲ್ಪನೆಗಳು ಸ್ಪಲ್ಪ ಕಮ್ಮಿಯಾಗುತ್ತವೆ. ಅದು ಇಬ್ಬರಿಗೂ ಒಳ್ಳೆಯದು.

ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮೂಲಕ ಮುಖವನ್ನೇ ನೋಡದೇ ಲವ್‌ ಮಾಡುವವರು ಈಗಲೂ ಇದ್ದಾರೆ. ಟೆಕ್ನಾಲಜಿಯ ದುಷ್ಪರಿಣಾಮಗಳು ಇವು. ಆದರೆ ಅದೇ ಟೆಕ್ನಾಲಜಿಯನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಂಡರೆ ಉಪಯೋಗವೇ ಹೆಚ್ಚಿದೆ. ಮುಖ ನೋಡದೇ ಲವ್‌ ಮಾಡಬಹುದು ಎಂಬುವುದನ್ನು ನನಗಂತೂ ನಂಬಲೂ ಸಾಧ್ಯವಿಲ್ಲ. ಅಂಥದ್ದೆಲ್ಲ ಎಷ್ಟರ ಮಟ್ಟಿಗೆ ವರ್ಕ್‌ ಆಗುತ್ತದೆ ಎನ್ನುವುದು ಅವರವರ ವೈಯಕ್ತಿಕ ದೃಷ್ಟಿಕೋನಕ್ಕೆ ಬಿಟ್ಟಿದ್ದು.

ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಬೇಕು. ಇಬ್ಬರ ನಡುವಿನ ವ್ಯತ್ಯಾಸ, ಭಿನ್ನಾಭಿಪ್ರಾಯಗಳ ಬಗ್ಗೆ ತಿಳಿದುಕೊಳ್ಳಲಿಕ್ಕೆ ಸಮಯ ಕೊಡಬೇಕು. ನಂತರ ಮುಂದುವರಿಯಬೇಕು. ಬಾಳಸಂಗಾತಿ ಆಯ್ಕೆ ಮಾಡಿಕೊಳ್ಳುವುದು ಸರಳ ವಿಷಯ ಅಲ್ಲವೇ ಅಲ್ಲ. ಹಾಗಾಗಿ ಅಲ್ಲಿ ತಾಳ್ಮೆ ಇದ್ದಷ್ಟೂ ಒಳಿತು. ಎಚ್ಚರಿಕೆ ವಹಿಸಿ ಮುಂದುವರಿಯಬೇಕು. ಒಂದು ದಿನ ಡೇಟ್‌ ಹೋಗಿ ಬಂದ್ವಿ. ಎಲ್ಲ ಮುಗಿದುಹೋಯ್ತು ಅನ್ನುವ ಥರ ಇರಬಾರದು. ಭಾವನೆಗೆ ಬೆಲೆಕೊಡಬೇಕು. ಪರಸ್ಪರ ಗೌರವ ಬೇಕು; ನಂಬಿಕೆಯೂ ಇರಬೇಕು. ಆಗ ಮಾತ್ರ ಪ್ರೇಮ ಎನ್ನುವುದು ಹೆಚ್ಚು ಅವಧಿಗೆ ನಿಲ್ಲುತ್ತದೆ. ತುಂಬ ಅಪ್‌ಡೇಟ್‌ ಆಗಬೇಕು ಎಂದುಕೊಂಡು ಒಂದು ದಿನ ಡೇಟ್‌ ಮಾಡ್ತೀವಿ; ವಾಟ್ಸ್‌ಆ್ಯಪ್‌ ಮೂಲಕವೇ ಪ್ರೇಮಿಸ್ತೀವಿ ಅಂತೆಲ್ಲ ಹೋದರೆ ಅವುಗಳು ಹೆಚ್ಚು ಕಾಲ ನಿಲ್ಲುವುದಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.