ಚಿತ್ರ ಕೃಪೆ: @SimpleSuni
ನಟಿ ಆಶಿಕಾ ರಂಗನಾಥ್ ಹಾಗೂ ನಟ ಎಸ್.ಎಸ್ ದುಷ್ಯಂತ್ ನಟನೆಯ ‘ಗತವೈಭವ‘ ಚಿತ್ರದ ಟೀಸರ್ ಅನಾವರಣಗೊಂಡಿದೆ. ದೀಪಕ್ ತಿಮ್ಮಪ್ಪ ನಿರ್ಮಾಣ ಮಾಡಿದ್ದು ಸಿಂಪಲ್ ಸುನಿ ನಿರ್ದೆಶಿಸಿದ್ದಾರೆ. ಈ ಸಿನಿಮಾವು ವಿಶ್ವದಾದ್ಯಂತ 14 ನವೆಂಬರ್ 2025ಕ್ಕೆ ಬಿಡುಗಡೆಯಾಗಲಿದೆ.
ಸಿನಿಮಾ ಟೀಸರ್ ಬಿಡುಗಡೆ ಬಗ್ಗೆ ನಿರ್ಮಾಪಕ, ನಿರ್ದೆಶಕರು ಸೇರಿದಂತೆ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಗತವೈಭವ ಟೀಸರ್ ಬಗ್ಗೆ ಅಭಿಮಾನಿಯೊಬ್ಬರು ‘ನಿರ್ದೇಶಕ ಸುನಿ ಅವರು ಒಳ್ಳೆಯ ಚಿತ್ರಗಳನ್ನು ನಿರ್ಮಿಸುತ್ತಿದ್ದು, ಪ್ರೇಕ್ಷಕರಿಗೆ ಇವರ ಸರಳ ಕಥೆ ಇಷ್ಟವಾಗುತ್ತದೆ‘ ಎಂದಿದ್ದಾರೆ. ಸಿನಿಮಾ ಟೀಸರ್ ಗೆ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.