ADVERTISEMENT

ಏಷ್ಯನ್ ಚಲನಚಿತ್ರೋತ್ಸವ: ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದ 'ವಿಕ್ಟೋರಿಯಾ'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2026, 6:15 IST
Last Updated 27 ಜನವರಿ 2026, 6:15 IST
   

ಗುವಾಹಟಿ: ಏಷ್ಯನ್ ಚಲನಚಿತ್ರೋತ್ಸವದಲ್ಲಿ ಮಲಯಾಳಂನ ಶಿವರಂಜಿನಿ ನಿರ್ದೇಶನದ ‘ವಿಕ್ಟೋರಿಯಾ’ ಚಿತ್ರವು ‌ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಗುವಾಹಟಿಯಲ್ಲಿ 4 ದಿನ ನಡೆದ ಏಷ್ಯನ್ ಚಲನಚಿತ್ರೋತ್ಸವದಲ್ಲಿ ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಿತ್ರಗಳು ಪ್ರದರ್ಶನಗೊಂಡವು.

ಏಷ್ಯನ್ ಚಲನಚಿತ್ರೋತ್ಸವದಲ್ಲಿ 'ವಿಕ್ಟೋರಿಯಾ' ಚಿತ್ರದ ನಿರ್ದೇಶನ, ಚಿತ್ರಕಥೆ ಹಾಗೂ ಛಾಯಾಗ್ರಾಹಕ ಆನಂದ್ ಅವರ ಛಾಯಾಗ್ರಹಣವು ತೀರ್ಪುಗಾರರ ಮೆಚ್ಚುಗೆ ಕಾರಣವಾಯಿತು.

ADVERTISEMENT

ನಟಿ ಮೀನಾಕ್ಷಿ ಜಯನ್ ಅವರು ಮುಖ್ಯ ಭೂಮಿಕೆಯಲ್ಲಿ ಬ್ಯೂಟಿಷಿಯನ್ ಪಾತ್ರದಲ್ಲಿ ನಟಿಸಿದ್ದಾರೆ.

ಕ್ರಿಶ್ಚಿಯನ್ ಧರ್ಮದ ಯುವತಿ ಹಿಂದೂ ಯುವಕನನ್ನು ವಿವಾಹ ಆಗುತ್ತಾಳೆ. ವಿವಾಹದ ಬಳಿಕ, ದೇವರ ಹೆಸರಿನಲ್ಲಿ ಬಲಿ ಕೊಡುವ ಪದ್ಧತಿಯನ್ನು ಪಾಲಿಸುತ್ತಾಳಾ ಅಥವಾ ಧಿಕ್ಕರಿಸುತ್ತಾಳಾ ಎಂಬುವುದೇ ‘ವಿಕ್ಟೋರಿಯಾ’ ಚಿತ್ರದ ಕಥಾಹಂದರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.