ADVERTISEMENT

ಬ್ರಾ ಸೈಜ್ ಕೇಳಿದ ವ್ಯಕ್ತಿಗೆ ನಟಿ ಸಯಂತನಿ ಕೊಟ್ಟ ಉತ್ತರ ಹೀಗಿತ್ತು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಏಪ್ರಿಲ್ 2021, 2:00 IST
Last Updated 9 ಏಪ್ರಿಲ್ 2021, 2:00 IST
ಸಯಂತನಿ ಘೋಷ್ ಇನ್‌ಸ್ಟಾಗ್ರಾಮ್ ಚಿತ್ರ(sayantanighosh0609)
ಸಯಂತನಿ ಘೋಷ್ ಇನ್‌ಸ್ಟಾಗ್ರಾಮ್ ಚಿತ್ರ(sayantanighosh0609)   

ಮುಂಬೈ: ಕಿರುತೆರೆಯ ಮಹಾಭಾರತದಲ್ಲಿ ಸತ್ಯವತಿ ಪಾತ್ರದಲ್ಲಿ ಗಮನ ಸೆಳೆದಿದ್ದ ನಟಿ ಸಯಂತನಿ ಘೋಷ್ ಅವರು ವಿಶ್ವ ಆರೋಗ್ಯ ದಿನದಂದು ತಮ್ಮ ಬ್ರಾ ಸೈಜ್ ಕೇಳಿದ ವ್ಯಕ್ತಿಗೆ ಸರಿಯಾದ ಉತ್ತರ ಕೊಟ್ಟು ಆನ್‌ಲೈನ್‌ನಲ್ಲಿ ಟ್ರೆಂಡ್ ಆಗಿದ್ದಾರೆ.

ಸಯಂತನಿ ಉತ್ತರ ಏನು?:ಇಂದು ನಾವು ವಿಶ್ವ ಆರೋಗ್ಯ ದಿನ ಆಚರಿಸಿದ್ದೇವೆ. ಆದರೆ, ನಿಮಗೆ ತಿಳಿದಿದೆ ಮಾನಸಿಕ ಆರೋಗ್ಯವು ಈಗ ಆರೋಗ್ಯದ ಪ್ರಮುಖ ಅಂಶವಾಗಿದೆ. ಹೌದು ನಿಮ್ಮ ದೇಹದ ಅಂಗಗಳನ್ನು ಫಿಟ್ ಆಗಿ ಇಟ್ಟುಕೊಳ್ಳಿ. ಆದರೆ, ನಿಮ್ಮ ಮನಸ್ಸನ್ನು ಮರೆಯಬೇಡಿ. ನಾವು ದೇಹದ ಎಲ್ಲ ಅಂಗಗಳನ್ನು ಸರಿಯಾಗಿಟ್ಟುಕೊಳ್ಳುವ ಸಮಯವಿದು. ಈ ಬದಲಾವಣೆಗೆ ನಾನು ಇಲ್ಲಿದ್ದೇನೆ, ನೀವು? ನೀವು ಇದನ್ನುಒಪ್ಪಿದರೆ. ಮೆಸೇಜ್ ಡ್ರಾಪ್ ಮಾಡಿ! ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಸಯಂತನಿ ಮತ್ತಷ್ಟು ಪೋಸ್ಟ್ ಹಾಕಿದ್ದಾರೆ. 'ನಿನ್ನೆ ನನ್ನ ಸಂವಾದದಲ್ಲಿ ವ್ಯಕ್ತಿಯೊಬ್ಬ ಬ್ರಾ ಸೈಜ್ ಕೇಳಿದ! ನಾನು ಆ ವ್ಯಕ್ತಿಗೆ ಸೂಕ್ತವಾದ ಉತ್ತರವನ್ನು ನೀಡಿದ್ದೇನೆ. ಆದರೂ ಈ ಬಗ್ಗೆ ನಾನು ಮತ್ತಷ್ಟು ಮಾತನಾಡಲು ಬಯಸುತ್ತೇನೆ ಎಂದಿರುವ ಅವರು, ‘ಥ್ರೆಡ್ ಟು ಎಂಡ್ ಸೈಜ್ ಮೆಟಾಲಿಟಿ’ ಎಂಬ ಶೀರ್ಷಿಕೆಯಡಿ, ‘ಯಾವುದೇ ರೀತಿಯ ಬಾಡಿ ಶೇಮಿಂಗ್ ಕೆಟ್ಟದು. ನಿರ್ದಿಷ್ಟವಾಗಿ, ಹೆಣ್ಣಿನ ಸ್ತನಗಳ ಬಗ್ಗೆ ಏಕೆ ಅಷ್ಟೊಂದು ಫ್ಯಾಸಿನೇಟ್ ಆಗಿದ್ದಾರೆ. ’ ಎಂದು ಬರೆದುಕೊಂಡಿದ್ದಾರೆ.

ಬಾಡಿ ಶೇಮಿಂಗ್ ನಿಲ್ಲಿಸಲು ಸಯಂತನಿ ತನ್ನ ಪೋಸ್ಟ್‌ನಲ್ಲಿ ಹಲವು ವಿವರಣೆ ಕೊಟ್ಟಿದ್ದಾರೆ. ಸ್ವಯಂ ಸ್ವೀಕಾರ ಮತ್ತು ಮಾತನಾಡುವ ತಮ್ಮ ತಿಳುವಳಿಕೆಯ ಬಗ್ಗೆ ಸುದೀರ್ಘ ಟಿಪ್ಪಣಿ ಬರೆದಿದ್ದಾರೆ. 'ಹೆಂಗಸರು, ನಾವು ನಮ್ಮನ್ನು ಪ್ರೀತಿಸಲು ಮತ್ತು ನಮಗಾಗಿ ನಿಲ್ಲಲು ಪ್ರಾರಂಭಿಸುವ ಸಮಯ ಇದು. ಬೇರೆ ಯಾರೂ ಆಗುವುದಿಲ್ಲ' ಎಂದು ಹೇಳಿದ್ದಾರೆ. ಇದರ ಜೊತೆಗೆ ಮತ್ತಷ್ಟು ವ್ಯಂಗ್ಯದ ಪೋಸ್ಟ್‌ಗಳು ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.