Avatar: Fire and Ash trailer
ಬೆಂಗಳೂರು: ಜೇಮ್ಸ್ ಕೆಮರೂನ್ ಅವರ ಜನಪ್ರಿಯ ಅವತಾರ್ ಸರಣಿಯ ಮೂರನೇ ಸಿನಿಮಾ ‘ಅವತಾರ್ ಫೈರ್ ಆ್ಯಂಡ್ ಆಶ್’ನ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ.
ಪ್ಯಾಂಡೊರಾ ಜಗತ್ತಿನ ಮತ್ತೊಂದು ಕಥೆಯನ್ನು ಹೇಳಲಿರುವ ಅವತಾರ್ ಫೈರ್ ಆ್ಯಂಡ್ ಆಶ್ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಅವತಾರ್ ಫ್ರಾಂಚೈಸಿಯ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಟ್ರೇಲರ್ ವೀಕ್ಷಣೆಗೆ ಲಭ್ಯವಿದೆ.
ಈ ಹೊಸ ಚಿತ್ರ ಹಿಂದಿನ ಎರಡೂ ಸಿನಿಮಾಗಳಿಗಿಂತಲೂ ವಿಶೇಷವಾಗಿರುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
₹2100 ಕೋಟಿಗೂ ಅಧಿಕ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರದ ವಿಶೇಷ ಎಂದರೆ ವರಾಂಗಾ ಎಂಬ ಹೊಸ ನೇಟಿವ್ ವಿಲನ್ ಪಾತ್ರವನ್ನು ಸೃಷ್ಟಿಸಲಾಗಿದೆ. ದೃಶ್ಯಗಳಂತೂ ಕಣ್ಣಿಗೆ ಹಬ್ಬವನ್ನುಂಟು ಮಾಡಲಿವೆ ಎನ್ನಲಾಗಿದೆ.
ಇದೇ ವರ್ಷ ಡಿಸೆಂಬರ್ 19 ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಅವರತಾರ್ ಮೊದಲ ಸಿನಿಮಾ ‘ಅವತಾರ್’ 2009 ರಲ್ಲಿ ಬಿಡುಗಡೆಯಾಗಿತ್ತು. ‘ಅವತಾರ್ ವೇ ಆಫ್ ವಾಟರ್’ ಎರಡನೇ ಸಿನಿಮಾ 2022ರಲ್ಲಿ ಬಿಡುಗಡೆಯಾಗಿತ್ತು.
2045 ರ ಸಮಯದಲ್ಲಿ ಭೂಮಿಯಿಂದ ಮಾನವರು ಪಂಡೊರಾ ಎಂಬ ಕಾಲ್ಪನಿಕ ಗೃಹಕ್ಕೆಹೋಗಿ ಅಲ್ಲಿನ ಅಮೂಲ್ಯ ವಸ್ತುವನ್ನು ತರಲು ಯತ್ನಿಸುತ್ತಾರೆ. ಆಗ ಅಲ್ಲಿನ ಮನುಷ್ಯರಂತ ಜೀವಿಗಳಿಂದ ಭೂಮಿಯ ಮಾನವರಿಗೆ ಎದುರಾಗುವ ಪ್ರತಿರೋಧ, ಪರಸ್ಪರ ಹೋರಾಟದ ಅಂಶಗಳನ್ನು ಅವತಾರ್ ಕಥೆ ಹೊಂದಿದೆ.
ಸ್ಯಾಮ್ ವರ್ತಿಂಗ್ಟನ್, ಜೋಯ್ ಸಲ್ಡಾನಾ, ಸಿಗೋರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಊನಾ ಚಾಪ್ಲಿನ್, ಕ್ಲಿಫ್ ಕರ್ಟಿಸ್, ಬ್ರಿಟನ್ ಡಾಲ್ಟನ್, ಟ್ರಿನಿಟಿ ಜೋ-ಲಿ ಬ್ಲಿಸ್, ಜ್ಯಾಕ್ ಚಾಂಪಿಯನ್, ಬೈಲಿ ಬಾಸ್, ಕೇಟ್ ವಿನ್ಸ್ಲೆಟ್ ಪ್ರಮುಖ ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.