ADVERTISEMENT

ಶರಣ್‌ –ಆಶಿಕಾ ಅಭಿನಯದ ‘ಅವತಾರ ಪುರುಷ–2’ ಸಿನಿಮಾದ ಟ್ರೇಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 13:24 IST
Last Updated 3 ಏಪ್ರಿಲ್ 2024, 13:24 IST
<div class="paragraphs"><p>‘ಅವತಾರ ಪುರುಷ–2’ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ರಿಷಿ,&nbsp;ಪ್ರವೀಣ್ ತೇಜ್‌, ‘ನೆನಪಿರಲಿ’ ಪ್ರೇಮ್, ಆಶಿಕಾ ರಂಗನಾಥ್‌, ಶರಣ್‌ ಹಾಗೂ ವಿಕ್ಕಿ ವರುಣ್</p></div>

‘ಅವತಾರ ಪುರುಷ–2’ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ರಿಷಿ, ಪ್ರವೀಣ್ ತೇಜ್‌, ‘ನೆನಪಿರಲಿ’ ಪ್ರೇಮ್, ಆಶಿಕಾ ರಂಗನಾಥ್‌, ಶರಣ್‌ ಹಾಗೂ ವಿಕ್ಕಿ ವರುಣ್

   

ಸ್ಯಾಂಡಲ್‌ವುಡ್‌ನ ‘ಅಧ್ಯಕ್ಷ’ ಶರಣ್, ‘ಆಪರೇಷನ್‌ ಅಲಮೇಲಮ್ಮ’ ಖ್ಯಾತಿಯ ರಿಷಿ ಜೊತೆ ಸಿನಿಮಾ ಮಾಡಬೇಕು ಎಂಬ ಆಸೆಯನ್ನು ಮುಂದಿಟ್ಟಿದ್ದಾರೆ.

ಶರಣ್‌ ಅಭಿನಯದ ‘ಅವತಾರ ಪುರುಷ–2’ ಸಿನಿಮಾದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ‘ರಾಮನ ಅವತಾರ’ವೆತ್ತಲು ಸಿದ್ಧವಾಗಿರುವ ರಿಷಿ ಅತಿಥಿಯಾಗಿ ಬಂದಿದ್ದರು. ಈ ವೇಳೆ ಮಾತನಾಡಿದ ಶರಣ್‌, ‘ಇತ್ತೀಚಿನ ದಿವಸಗಳಲ್ಲಿ ಕಾಮಿಡಿ ಎಂಬ ವಿಚಾರ ಬಂದಾಗ, ಅದ್ಭುತವಾದ ಕಾಮಿಡಿ ಟೈಮಿಂಗ್‌ ಹಾಗೂ ಹಾಸ್ಯಪ್ರಜ್ಞೆಯುಳ್ಳ ನಾಯಕ ನಟರಲ್ಲಿ ರಿಷಿ ಒಬ್ಬರು. ನಾವಿಬ್ಬರೂ ಒಂದೆರಡು ಪ್ರಾಜೆಕ್ಟ್‌ಗಳಲ್ಲಿ ಜೊತೆಯಾಗಿ ನಟಿಸಬೇಕಿತ್ತು. ಆದರೆ ಅದು ಆಗಲಿಲ್ಲ. ಮೊನ್ನೆ ಸಿಂಪಲ್‌ ಸುನಿ ಬಂದಿದ್ದಾಗ, ‘ಆಪರೇಷನ್‌ ಅಲಮೇಲಮ್ಮ’ ರೀತಿಯ ಸ್ಕ್ರಿಪ್ಟ್‌ ಮಾಡಿ. ನಾವಿಬ್ಬರೂ ಕೆಲಸ ಮಾಡೋಣ’ ಎಂದಿದ್ದೆ. ಯಾರ ಜೊತೆ ಡ್ಯುಯಲ್‌ ಹೀರೊ ಆಗಿ ನಟಿಸಬೇಕು ಎಂದು ಕೇಳಿದರೆ, ನಾನು ರಿಷಿ ಹೆಸರನ್ನೇ ಹೇಳುತ್ತೇನೆ. ಒಂದೊಳ್ಳೆಯ ಸ್ಕ್ರಿಪ್ಟ್‌ ನಮಗಿಬ್ಬರಿಗೂ ಬರಲಿ’ ಎಂದರು.

ADVERTISEMENT

‘ಎರಡು ಮೂರು ವರ್ಷದ ಪಯಣ ಈ ‘ಅವತಾರ ಪುರುಷ’ ಸಿನಿಮಾ. ಇದು ಬಹಳ ಇಷ್ಟಪಟ್ಟು ಒಪ್ಪಿಕೊಂಡ ಸಿನಿಮಾ. ಸುನಿ ಹಾಗೂ ಪುಷ್ಕರ್‌ ಬಂದು ಈ ಚಿತ್ರದ ಕಥೆ ಹೇಳಿದಾಗ ಮೊದಲು ಕೊಂಚ ಗಲಿಬಿಲಿಯಾಗಿತ್ತು. ಸುನಿ ಕಾಮಿಡಿ ಜಾನರ್‌ ಸಿನಿಮಾ ಮಾಡುವಾತ. ನಾನೂ ಹಾಸ್ಯ ಪಾತ್ರಗಳನ್ನು ಮಾಡುತ್ತಾ ಬಂದವನು. ಒಂದು ಕಾಮಿಡಿ ಸಬ್ಜೆಕ್ಟ್‌ ಸಿನಿಮಾ ತಂದಿರಬಹುದು ಎಂದುಕೊಂಡಿದ್ದೆ. ಆದರೆ ಸುನಿ ಕಥೆ ಹೇಳುತ್ತಾ, ಇದು ಪೂರ್ಣ ಹಾಸ್ಯ ಪ್ರಧಾನ ಚಿತ್ರವಲ್ಲ. ಅಲ್ಲಲ್ಲಿ ಹಾಸ್ಯವಿರುತ್ತದೆ ಎಂದರು. ನಾನೂ ಪಾತ್ರಗಳಲ್ಲಿ ಪ್ರಯೋಗ ಮಾಡುತ್ತಾ ಬಂದವನು. ಹೀಗಾಗಿ ‘ಅನಿಲ’ನ ಪಾತ್ರವನ್ನು ಒಪ್ಪಿಕೊಂಡೆ’ ಎಂದರು ಶರಣ್‌.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.