ADVERTISEMENT

‘ಬಾನ ದಾರಿಯಲ್ಲಿ’ ಆಫ್ರಿಕಾದತ್ತ ಗಣೇಶ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 10:30 IST
Last Updated 13 ಸೆಪ್ಟೆಂಬರ್ 2022, 10:30 IST
‘ಬಾನ ದಾರಿಯಲ್ಲಿ’ ರುಕ್ಮಿಣಿ ವಸಂತ್‌
‘ಬಾನ ದಾರಿಯಲ್ಲಿ’ ರುಕ್ಮಿಣಿ ವಸಂತ್‌   

ಗೋಲ್ಡನ್‌ ಸ್ಟಾರ್‌ ಗಣೇಶ್‌ ಕ್ರಿಕೆಟಿಗನಾಗಿ ಕಾಣಿಸಿಕೊಂಡಿರುವ ‘ಬಾನ ದಾರಿಯಲ್ಲಿ’ ಚಿತ್ರ ಎರಡು ಹಂತಗಳ ಶೂಟಿಂಗ್‌ ಮುಗಿಸಿದೆ. ಇದೀಗ ಮೂರನೇ ಹಂತದ ಶೂಟಿಂಗ್‌ಗೆ ಆಫ್ರಿಕಾ ಪ್ರವಾಸ ಹಮ್ಮಿಕೊಂಡಿದೆ. ಇದು ಪ್ರೀತಂ ಗುಬ್ಬಿ ನಿರ್ದೇಶನದ ಚಿತ್ರ.

ಕ್ರೀಡಾ ವಿಷಯದ ಕಥಾ ವಸ್ತುವನ್ನಿಟ್ಟುಕೊಂಡು ಚಿತ್ರ ಮೂಡಿಬರಲಿದೆ. ನಾಯಕಿ ರುಕ್ಮಿಣಿ ವಸಂತ್‌ ಇಲ್ಲಿ ಈಜುಗಾರ್ತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಜುಡುಗೆ ಧರಿಸಿರುವ ಅವರ ಚಿತ್ರಗಳು ಜಾಲತಾಣಗಳಲ್ಲಿ ಗಮನ ಸೆಳೆದಿವೆ.

ಈ ಚಿತ್ರದ ಕಥೆ ಪ್ರೀತಾ ಜಯರಾಂ ಅವರದು. ಮಾಸ್ತಿ ಸಂಭಾಷಣೆ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ರೀಶ್ಮಾ ನಾಣಯ್ಯ, ರಂಗಾಯಣ ರಘು ತಾರಾಗಣದಲ್ಲಿದ್ದಾರೆ.ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ಚಿತ್ರ ನಿರ್ಮಾಣ ವಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.