ADVERTISEMENT

ಹಿರಿಯ ಬಂಗಾಳಿ ನಟಿ ಬಸಂತಿ ಚಟರ್ಜಿ ನಿಧನ

ಪಿಟಿಐ
Published 13 ಆಗಸ್ಟ್ 2025, 5:58 IST
Last Updated 13 ಆಗಸ್ಟ್ 2025, 5:58 IST
<div class="paragraphs"><p>ಬಸಂತಿ ಚಟರ್ಜಿ</p></div>

ಬಸಂತಿ ಚಟರ್ಜಿ

   

Credit: X/@SanjitDatta194

ಕೋಲ್ಕತ್ತ: ಹಿರಿಯ ಬಂಗಾಳಿ ನಟಿ ಬಸಂತಿ ಚಟರ್ಜಿ (88) ಮಂಗಳವಾರ ರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ಬಸಂತಿ ಚಟರ್ಜಿ ಅವರು ದೀರ್ಘಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹಲವು ತಿಂಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪಶ್ಚಿಮ ಬಂಗಾಳದ ಮೋಷನ್ ಪಿಕ್ಚರ್ ಆರ್ಟಿಸ್ಟ್ಸ್ ಫೋರಮ್ ವಕ್ತಾರರು ತಿಳಿಸಿದ್ದಾರೆ.

ಐದು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ ಚಟರ್ಜಿ ಅವರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಥಾಗಿನಿ’, ‘ಮಂಜರಿ ಒಪೇರಾ’ ಮತ್ತು ‘ಅಲೋ’ ಚಿತ್ರಗಳ ಮೂಲಕ ಚಟರ್ಜಿ ಜನಪ್ರಿಯತೆ ಪಡೆದಿದ್ದರು.

‘ಭೂತು’, ‘ಬೋರೋನ್’, ‘ದುರ್ಗಾ ದುರ್ಗೇಶರಿ’, ‘ಗೀತಾ ಎಲ್‌ಎಲ್‌ಬಿ’ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿಯೂ ಅವರು ಅಭಿನಯಿಸಿದ್ದರು. ಜತೆಗೆ, ರಂಗಭೂಮಿಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಬಸಂತಿ ಚಟರ್ಜಿ ಅವರ ನಿಧನಕ್ಕೆ ಸಿನಿಮಾರಂಗದ ಗಣ್ಯರು ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.