ADVERTISEMENT

ನೇಣು ಬಿಗಿದ ಸ್ಥಿತಿಯಲ್ಲಿ ಬಂಗಾಳಿ ಚಲನಚಿತ್ರ ಛಾಯಾಗ್ರಾಹಕನ  ಮೃತದೇಹ ಪತ್ತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2025, 5:59 IST
Last Updated 24 ನವೆಂಬರ್ 2025, 5:59 IST
   

ಕೋಲ್ಕತ್ತ : ಬಂಗಾಳಿ ಚಲನಚಿತ್ರ ಛಾಯಾಗ್ರಾಹಕ ವಿಕ್ಕಿ ಎಂದೇ ಪ್ರಸಿದ್ಧಿ ಪಡೆದಿದ್ದ ಸೌಮ್ಯದೀಪ್ ಗುಯಿನ್ (40) ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿ ಸೌಮ್ಯದೀಪ್ ಗುಯಿನ್ ಅವರ ಶವ ಭಾನುವಾರ (ನ.23) ಪತ್ತೆಯಾಗಿದೆ. ಕುಟುಂಬಸ್ಥರು ಸಾಮಾಧಾನಗೊಂಡ ಬಳಿಕ ಸೌಮ್ಯದೀಪ್  ಅವರ ಸಾವಿನ ಕುರಿತು ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

'ಸೌಮ್ಯದೀಪ್ ಅವರು ಚಿತ್ರರಂಗದಲ್ಲಿ ಯಶಸ್ಸು ಸಾಧಿಸಬೇಕು ಎನ್ನುವ ಕನಸು ಕಂಡಿದ್ದರು. ಆದರೆ, ಅವರು ಅಂದುಕೊಂಡಷ್ಟು ಯಶಸ್ಸು ಅವರಿಗೆ ಸಿಗದ ಕಾರಣ ಖಿನ್ನತೆಗೆ ಒಳಗಾಗಿದ್ದರು' ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಛಾಯಾಗ್ರಾಹಕ ಗುಯಿನ್ ಅವರು ನಿರ್ದೇಶಕ ರಾಜ ಚಂದಾ ಹಾಗೂ ಛಾಯಾಗ್ರಾಹಕ ಪ್ರೇಮೇಂದ್ರ ಬಿಕಾಶ್ ಚಾಕಿ ಜತೆ ಆತ್ಮೀಯರಾಗಿದ್ದರು. ಸೌಮ್ಯದೀಪ್ ವಿವಾಹ ಆಗುದ್ದು, ಅವರಿಗೆ ಓರ್ವ ಮಗಳಿದ್ದಾಳೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.