
ಶಿಕ್ಷಣ ವ್ಯವಸ್ಥೆಯ ಕುರಿತಾದ ಕಥೆಯನ್ನು ಹೊಂದಿರುವ ‘ಭಾರತಿ ಟೀಚರ್’ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಸಚಿವ ಮಧು ಬಂಗಾರಪ್ಪ ಟ್ರೇಲರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಎಂ.ಎಲ್.ಪ್ರಸನ್ನ ನಿರ್ದೇಶನದ ಚಿತ್ರಕ್ಕೆ ರಾಘವೇಂದ್ರ ರೆಡ್ಡಿ ಬಂಡವಾಳ ಹೂಡಿದ್ದಾರೆ.
‘ಭಾರತಿ ಎನ್ನುವ ಏಳನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕಿಯಾಗುವ ಕನಸನ್ನು ಹೇಗೆ ನನಸು ಮಾಡಿಕೊಳ್ಳುತ್ತಾಳೆ ಎಂಬುದೇ ಚಿತ್ರದ ಒಟ್ಟಾರೆ ಕಥೆ. ಕರ್ನಾಟಕದಲ್ಲಿ ಕನ್ನಡದಲ್ಲಿ ಶಿಕ್ಷಣ ಎಷ್ಟು ಮುಖ್ಯ ಎಂಬುದನ್ನು ಹೇಳಿದ್ದೇವೆ. ಕನ್ನಡ ಕಲಿಕೆಗೆ ಚಿತ್ರದಲ್ಲಿ ಒತ್ತು ನೀಡಲಾಗಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ನಟ ಆದಿತ್ಯ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಚಿತ್ರೀಕರಣ ಮುಕ್ತಾಯದ ಹಂತದಲ್ಲಿದೆ’ ಎಂದರು ನಿರ್ದೆಶಕ.
ರೋಹಿತ್ ರಾಘವೇಂದ್ರ ನಾಯಕ. ಶಿಕ್ಷಕರಾಗಿ ಸಿಹಿಕಹಿ ಚಂದ್ರು ಕಾಣಿಸಿಕೊಂಡಿದ್ದಾರೆ. ಕು.ಯಶಿಕಾ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಗೋವಿಂದೇಗೌಡ, ಅಶ್ವಿನ್ ಹಾಸನ್, ದಿವ್ಯಾ ಅಂಚನ್ ಮುಂತಾದವರು ನಟಿಸಿದ್ದಾರೆ. ಎಂ.ಬಿ.ಹಳ್ಳಿಕಟ್ಟಿ ಛಾಯಾಚಿತ್ರಗ್ರಹಣ, ಸುಜಿತ್ ನಾಯಕ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.