ADVERTISEMENT

‘ಭುಜ್‌: ದ ಪ್ರೈಡ್‌ ಆಫ್‌ ಇಂಡಿಯಾ' ಸಿನಿಮಾ ಪೋಸ್ಟರ್‌ ಬಿಡುಗಡೆ

ಗುಜರಾತಿ ಮಹಿಳೆ ಗೆಟಪ್‌ನಲ್ಲಿ ಗಮನ ಸೆಳೆಯುವ ಸೋನಾಕ್ಷಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 12:21 IST
Last Updated 17 ಜುಲೈ 2020, 12:21 IST
‘ಭುಜ್‌: ದ ಪ್ರೈಡ್‌ ಆಫ್ ಇಂಡಿಯಾ’ ಚಿತ್ರದ ಪೋಸ್ಟರ್‌
‘ಭುಜ್‌: ದ ಪ್ರೈಡ್‌ ಆಫ್ ಇಂಡಿಯಾ’ ಚಿತ್ರದ ಪೋಸ್ಟರ್‌   

ನಟ ಸಂಜಯ್ ದತ್‌, ಅಜಯ್ ದೇವಗನ್‌ ಮತ್ತು ಸೋನಾಕ್ಷಿ ಸಿನ್ಹಾ ನಟಿಸಿದ ಬಾಲಿವುಡ್‌ನ‌ ಮತ್ತೊಂದು ಬಿಗ್‌ ಬಜೆಟ್ ಮತ್ತುಬಹುತಾರಾಗಣ ಚಿತ್ರ ‘ಭುಜ್: ದ ಪ್ರೈಡ್‌ ಆಫ್‌ ಇಂಡಿಯಾ’ ಪೋಸ್ಟರ್ ಶುಕ್ರವಾರ‌ ಬಿಡುಗಡೆಯಾಗಿದೆ.

ಗುಜರಾತ್‌ನ ಸಾಮಾಜಿಕ ಕಾರ್ಯಕರ್ತೆ ಸುಂದರ್‌ ಬೆನ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಸೋನಾಕ್ಷಿ ಸಿನ್ಹಾ ಇನ್‌ಸ್ಟಾಗ್ರಾಂನಲ್ಲಿ ಚಿತ್ರದ ಪೋಸ್ಟರ್‌‌ ಹಂಚಿಕೊಂಡಿದ್ದಾರೆ.

ಮೈ ತುಂಬಾ ಹಚ್ಚೆ ಮತ್ತು ಗುಜರಾತಿ ಸಾಂಪ್ರದಾಯಿಕ ಉಡುಗೆಯಲ್ಲಿ ಬಿಂದಾಸ್‌ ಆಗಿ ನಡೆದುಕೊಂಡು ಹೋಗುತ್ತಿರುವ ಸೋನಾಕ್ಷಿಯ ಪೋಸ್ಟರ್ ತಕ್ಷಣಕ್ಕೆ ಗಮನ ಸೆಳೆಯುತ್ತದೆ.‌ ಅಕೆಯ ಹಿನ್ನೆಲೆಯಲ್ಲಿ ಯುದ್ಧಭೂಮಿ ಕಾಣಿಸುತ್ತದೆ.

ADVERTISEMENT

ಇಂಡೊ–ಪಾಕ್‌ ಯುದ್ಧವನ್ನು ಹಿನ್ನೆಲೆಯಲ್ಲಿ ಹೆಣೆಯಲಾಗಿರುವ ಮಹಿಳಾ ಪ್ರಧಾನ ಚಿತ್ರವನ್ನು ಬರೆದು, ನಿರ್ದೇಶಿಸುತ್ತಿರುವುದು ಅಭಿಷೇಕ್‌ ದುದೈಯ್ಯಾ. ಶೀಘ್ರದಲ್ಲಿಯೇ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

‘ಗುಜರಾತ್‌ನ ಸಾಮಾಜಿಕ ಕಾರ್ಯಕರ್ತೆ ಮತ್ತು ದಿಟ್ಟ ಮಹಿಳೆ ಸುಂದರ್ ಬೆನ್‌ ಝೇಠಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಗೌರವ ಸಿಕ್ಕಿದೆ’ ಎಂದು ಸೋನಾಕ್ಷಿ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

1971ರ ಭಾರತ–ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಯನ್ನು ಬೆಂಬಲಿಸಲು ಸುಂದರ್‌ ಬೆನ್‌ 299 ಮಹಿಳೆಯೊಂದಿಗೆ ಭುಜ್‌ ಗಡಿಗೆ ತೆರಳಿದ್ದ ದಿಟ್ಟ ಮಹಿಳೆ.ಇದೇ ಕತೆಯನ್ನು ಎಳೆಯಾಗಿ ಇಟ್ಟುಕೊಂಡು ನಿರ್ಮಿಸಿದ ಚಿತ್ರವೇ ‘ಭುಜ್‌: ದ ಪ್ರೈಡ್ ಆಫ್‌ ಇಂಡಿಯಾ’.

ಬಾಲಿವುಡ್‌ನ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ಸಂಜಯ್ ದತ್‌, ಅಜಯ್‌ ದೇವಗನ್‌, ಆ್ಯಮಿ ವಿರ್ಕ್, ಶರದ್‌ ಕೆಳ್ಕರ್‌ ಪ್ರಮುಖ ತಾರಾಗಣದಲ್ಲಿದ್ದಾರೆ.‌

ಭಾರತ–ಪಾಕ್ ಯುದ್ಧದಲ್ಲಿ ಸಾಹಸ ಮೆರೆದಿದ್ದ ಭಾರತೀಯ ವಾಯುಸೇನೆಯ ಸ್ಕ್ವಾಡ್ರನ್‌ ಲೀಡರ್ ವಿಜಯ್‌ ಕಾರ್ನಿಕ್‌‌ ಪಾತ್ರದಲ್ಲಿ ಅಜಯ್‌ ದೇವಗನ್‌ ಕಾಣಿಸಿಕೊಂಡಿದ್ದಾರೆ. ಅಜಯ್ ಮಿಲಿಟರಿ ಉಡುಪಿನಲ್ಲಿರುವ‌ ಮತ್ತೊಂದು ಪೋಸ್ಟರ್‌ ಕೂಡ ಬಿಡುಗಡೆಯಾಗಿದೆ. ಎರಡೂ ಪೋಸ್ಟರ್‌ಗಳ ಹಿನ್ನೆಲೆಯಲ್ಲಿ ಯುದ್ಧಭೂಮಿಯ ಭೀಕರ ಸನ್ನಿವೇಶಗಳು ಕಣ್ಣಿಗೆ ಬೀಳುತ್ತವೆ.

‘ತಾನಾಜಿ’ ನಂತರ ನಾನು ನಟಿಸುತ್ತಿರುವ ‘ಭುಜ್’ ಕೂಡ ನೈಜ ಘಟನೆಗಳನ್ನು ಆಧರಿಸಿ ತೆಗೆದ ಚಿತ್ರ. 1971ರ ಯುದ್ಧದಲ್ಲಿಭುಜ್‌ ಪಾಕಿಸ್ತಾನದ ಪಾಲಾಗದಂತೆ ತಡೆದ ಒಂದಷ್ಟು ಜನರ ಸಾಹಸಗಾಥೆಯೇ ಈ ಚಿತ್ರದ ಜೀವಾಳ’ ಎಂದು ಅಜಯ್‌ ಹೇಳಿದ್ದಾರೆ.‌

ಚಿತ್ರ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಕೊರೊನಾ ಕಾರಣ ಚಿತ್ರಮಂದಿರಗಳು ಮುಚ್ಚಿದ ಕಾರಣ ಈ ಚಿತ್ರವೂ ಒಟಿಟಿ ವೇದಿಕೆಲ್ಲಿಯೇ ಬಿಡುಗಡೆಯಾಗಲಿದೆ. ಸರಿ ಸುಮಾರು 17 ಚಿತ್ರಗಳು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.