ADVERTISEMENT

Sandalwood: ಅ.24ರಂದು ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ತೆರೆಗೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 23:30 IST
Last Updated 29 ಆಗಸ್ಟ್ 2025, 23:30 IST
ಮಹೇಶ್ ಗೌಡ, ಕಾಜಲ್‌ ಕುಂದರ್‌ 
ಮಹೇಶ್ ಗೌಡ, ಕಾಜಲ್‌ ಕುಂದರ್‌    

‘ಮಹಿರಾ’ ಸಿನಿಮಾ ಖ್ಯಾತಿಯ ಮಹೇಶ್ ಗೌಡ ನಿರ್ಮಾಣ ಮಾಡಿ ನಿರ್ದೇಶಿಸಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 

ಈಗಾಗಲೇ ಪೋಸ್ಟರ್ ಮೂಲಕ ಗಮನಸೆಳೆದಿರುವ ಈ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿತ್ರ ಅಕ್ಟೋಬರ್ 24ರಂದು ತೆರೆಕಾಣುತ್ತಿದೆ. 

‘ಇದು ಭಿನ್ನ ಬಗೆಯ ಸಿನಿಮಾ. ನಮ್ಮ ಸುತ್ತಮುತ್ತಲೇ ವಿಟಿಲಿಗೋ ಅಂದರೆ ತೊನ್ನು ಎಂಬ ಚರ್ಮದ ಸಮಸ್ಯೆ ಅನೇಕರನ್ನು ಆವರಿಸಿಕೊಂಡಿರುತ್ತದೆ. ಅಂತಹ ಕಾಯಿಲೆಯಲ್ಲದ ಕಾಯಿಲೆಯ ಮೇಲೆ ತಯಾರಾಗಿರುವ ಸಿನಿಮಾವಿದು. ಹೊರ ಜಗತ್ತಿನ ಪಾಲಿಗೆ ತೊನ್ನು ಅನ್ನುವುದು ಚರ್ಮ ವ್ಯಾಧಿ. ಅದರ ಸುತ್ತ ಹಬ್ಬಿಕೊಂಡಿರುವ ಚಿತ್ರವಿಚಿತ್ರ ನಂಬಿಕೆಗಳದ್ದೇ ದೊಡ್ಡ ಕಥೆಯಿದೆ. ಈ ಸಮಸ್ಯೆಗೊಳಗಾಗದ ಜೀವವೊಂದರ ಕಥೆ ಇದು’ ಎಂದಿದ್ದಾರೆ ಮಹೇಶ್‌. 

ADVERTISEMENT

ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಕಾಜಲ್ ಕುಂದರ್ ಇಲ್ಲಿ ‘ಕವಿತಾ’ ಎಂಬ ಪಾತ್ರವನ್ನು ನಿಭಾಯಿಸಿದ್ದಾರೆ. ಸ್ವತಃ ಈ ಸಮಸ್ಯೆ ಹೊಂದಿರುವ ಮಹೇಶ್ ಗೌಡ ಅವರೇ ಈ ಸಿನಿಮಾದ ನಾಯಕನಾಗಿ ನಟಿಸಿದ್ದಾರೆ. ವಿಶಿಷ್ಟವಾದ ಕಥೆಯನ್ನು ಕಮರ್ಷಿಯಲ್‌ ಧಾಟಿಯಲ್ಲಿ ಮನರಂಜನಾತ್ಮಕವಾದ ಅಂಶಗಳೊಂದಿಗೆ ಕಟ್ಟಿಕೊಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ವೀಣಾ ಸುಂದರ್, ಜಹಾಂಗೀರ್, ರವಿ ಭಟ್ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.