ADVERTISEMENT

ಮಹೇಶ್ ಗೌಡ ನಿರ್ದೇಶನದ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ಚಿತ್ರಕ್ಕೆ ಶ್ರೀಮುರಳಿ ಸಾಥ್‌

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 23:30 IST
Last Updated 14 ಅಕ್ಟೋಬರ್ 2025, 23:30 IST
ಕಾಜಲ್‌ ಕುಂದರ್‌, ಮಹೇಶ್‌ ಗೌಡ
ಕಾಜಲ್‌ ಕುಂದರ್‌, ಮಹೇಶ್‌ ಗೌಡ   

ಮಹೇಶ್ ಗೌಡ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರ ಅ.24ರಂದು ತೆರೆ ಕಾಣುತ್ತಿದೆ. ಚಿತ್ರವನ್ನು ನಟ ಶ್ರೀಮುರಳಿ ಅರ್ಪಿಸುತ್ತಿದ್ದಾರೆ.  

‘ವಿಟಿಲಿಗೋ ಎಂಬ ಸಮಸ್ಯೆಯ ಸುತ್ತ ರೂಪುಗೊಂಡಿರುವ ಈ ಸಿನಿಮಾದ ಕೆಲ ತುಣುಕುಗಳನ್ನು ಶ್ರೀಮುರಳಿ ವೀಕ್ಷಿಸಿ, ಸಿನಿಮಾವನ್ನು ತಾವೇ ಅರ್ಪಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ’ ಎಂದು ಚಿತ್ರತಂಡ ಹೇಳಿದೆ.

ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಚಿತ್ರ ನಿರ್ಮಾಣಗೊಂಡಿದೆ. ‘ಇದು ಸಂಪೂರ್ಣ ಕಮರ್ಷಿಯಲ್‌ ಸಿನಿಮಾ. ವಿಟಿಲಿಗೋ ಅಂದರೆ, ತೊನ್ನಿನ ಸಮಸ್ಯೆ ಕುರಿತಾದ ಕಥೆ ಹೊಂದಿರುವ ಚಿತ್ರವಿದು. ಸಾಮಾನ್ಯವಾಗಿ ಇಂಥ ಕಥಾ ಹಂದರದ ಯಾವುದೇ ಸಿನಿಮಾದಲ್ಲಿ ಪಾತ್ರಧಾರಿಗಳು ಮೇಕಪ್ ಮೂಲಕ ಅದಕ್ಕೆ ಜೀವ ತುಂಬುತ್ತಾರೆ. ಆದರೆ ನಾನೇ ಆ ಸಮಸ್ಯೆ ಹೊಂದಿರುವುದರಿಂದ ಪಾತ್ರ ನಿರ್ವಹಿಸಿದ್ದೇನೆ’ ಎಂದಿದ್ದಾರೆ ಮಹೇಶ್‌ ಗೌಡ. 

ADVERTISEMENT

ಕಾಜಲ್‌ ಕುಂದರ್‌ ಚಿತ್ರದ ನಾಯಕಿ. ರಿಯೊ ಆಂಟೋನಿ ಸಂಗೀತ, ಕಿರಣ್‌ ಸಿ.ಎಚ್‌. ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.