ADVERTISEMENT

ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ಗೆ ಕೋವಿಡ್‌–19 ದೃಢ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಸೆಪ್ಟೆಂಬರ್ 2020, 10:16 IST
Last Updated 6 ಸೆಪ್ಟೆಂಬರ್ 2020, 10:16 IST
ನಟ ಅರ್ಜುನ್‌ ಕಪೂರ್‌
ನಟ ಅರ್ಜುನ್‌ ಕಪೂರ್‌   

ಬೆಂಗಳೂರು: ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ಗೆ ಕೋವಿಡ್‌–19 ದೃಢಪಟ್ಟಿದೆ. 'ಸೋಂಕು ಲಕ್ಷಣಗಳು ಕಾಣಿಸಿಕೊಂಡಿಲ್ಲ, ಯಾವುದೇ ತೊಂದರೆ ಇಲ್ಲ' ಎಂದು ಭಾನುವಾರ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಪ್ರಕಟಿಸಿಕೊಂಡಿದ್ದಾರೆ.

ವೈದ್ಯರು ಮತ್ತು ಅಧಿಕಾರಿಗಳ ಸಲಹೆ ಮೇರೆಗೆ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರುವುದಾಗಿ ಅರ್ಜುನ್‌ ಕಪೂರ್ ಹೇಳಿದ್ದಾರೆ.

'ಇಡೀ ಮಾನವ ಕುಲ ಈ ವೈರಸ್‌ನ್ನು ದಾಟಿ ಸಾಗಲಿದೆ ಎಂಬ ಭರವಸೆ ಇದೆ' ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.