ADVERTISEMENT

10ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ 80ರ ಹರೆಯದ ಬಾಲಿವುಡ್ ನಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜನವರಿ 2026, 10:55 IST
Last Updated 19 ಜನವರಿ 2026, 10:55 IST
<div class="paragraphs"><p>ಕೃಪೆ:&nbsp;ಇನ್ಸ್ಟಾಗ್ರಾಮ್</p></div>
   

ಕೃಪೆ: ಇನ್ಸ್ಟಾಗ್ರಾಮ್

ಬಾಲಿವುಡ್ ಹಿರಿಯ ನಟ ಕಬೀರ್ ಬೇಡಿ (80) ತಮಗಿಂತ 29 ವರ್ಷ ಕಿರಿಯ ವಯಸ್ಸಿನ ಪತ್ನಿ ಪರ್ವೀನ್ ದುಸಾಂಜ್ ಅವರ ಜೊತೆ 10ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.

ವಿವಾಹ ವಾರ್ಷಿಕೋತ್ಸವದ ಜತೆಗೆ ತಮ್ಮ ಜನ್ಮದಿನವನ್ನೂ ಕಬೀರ್ ಗೋವಾ ಬೀಚ್‌ನಲ್ಲಿ ಆಚರಿಸಿಕೊಂಡಿದ್ದಾರೆ.

ADVERTISEMENT

ಗೋವಾದಲ್ಲಿ ಕಳೆದ ಕ್ಷಣಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಕಬೀರ್ ಬೇಡಿ, ‘ನಮ್ಮ 10ನೇ ವಿವಾಹ ವಾರ್ಷಿಕೋತ್ಸವ, 20 ವರ್ಷಗಳ ಒಡನಾಟ, ಹಾಗೂ ನನ್ನ ಜನ್ಮದಿನವನ್ನು ಹಸಿರು ತೆಂಗಿನ ಮರಗಳು, ಅಪ್ಪಳಿಸುವ ಅಲೆಗಳು, ಸೂರ್ಯಕಿರಣಗಳಿಂದ ಕಂಗೊಳಿಸುವ ಕಡಲತೀರದಲ್ಲಿ ಆಚರಿಸಿ ಸಂಭ್ರಮಿಸಿದೆವು’ ಎಂದು ಬರೆದುಕೊಂಡಿದ್ದಾರೆ.

‘ನೆನಪಿಸಿಕೊಳ್ಳಲು.. ಆಲೋಚಿಸಲು..ಮರುಹೊಸತನ ಪಡೆಯಲು.. ಕಡಲ ತೀರ ಸಾಕ್ಷಿಯಾಯಿತು’ ಎಂದು ಬರೆದುಕೊಂಡಿದ್ದಾರೆ.

'ಕೈಟ್ಸ್‌', 'ತಾಜ್‌ಮಹಲ್', 'ಅಶಾಂತಿ' ಸೇರಿದಂತೆ ಅನೇಕ ಚಿತ್ರಗಳಲ್ಲಿ ಕಬೀರ್ ನಟಿಸಿದ್ದು, ಬಾಲಿವುಡ್‌ ಮಾತ್ರವಲ್ಲದೆ ಹಾಲಿವುಡ್‌ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.

ಭಾರತದ ಮೂಲದವರಾದರೂ ಇಟಲಿಯ ಪ್ರಖ್ಯಾತ ಧಾರಾವಾಹಿ 'ಸಂದೂಕನ್'ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಯುರೋಪಿನಾದ್ಯಂತ ಜನ ಮೆಚ್ಚುಗೆ ಗಳಿಸಿದ್ದಾರೆ.

ಹಿರಿಯ ಬಾಲಿವುಡ್ ನಟ ಕಬೀರ್ ಬೇಡಿ ಅವರಿಗೆ ಬ್ರಿಟನ್ ಮೂಲದ ಪರ್ವೀನ್ ದುಸಾಂಜ್ ಅವರು ನಾಲ್ಕನೇ ಪತ್ನಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.