ADVERTISEMENT

ಮತ್ತೊಂದು ಹಾಟ್ ಫೋಟೊ ವೈರಲ್‌: ಬಿಸಿಲಿಗೆ ನಶೆ ಏರಿಸಿದ ದಿಶಾ ಪಟಾನಿ !

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ನವೆಂಬರ್ 2021, 7:11 IST
Last Updated 27 ನವೆಂಬರ್ 2021, 7:11 IST
ನಟಿ ದಿಶಾ ಪಟಾನಿ (ಇನ್‌ಸ್ಟಾಗ್ರಾಂ ಚಿತ್ರ)
ನಟಿ ದಿಶಾ ಪಟಾನಿ (ಇನ್‌ಸ್ಟಾಗ್ರಾಂ ಚಿತ್ರ)   

ನವದೆಹಲಿ: ಇಂಟರ್ನೆಟ್‌ನಲ್ಲಿ ತಮ್ಮ ಮಾದಕ ಭಂಗಿಗಳ ಮೂಲಕ ನಟಿ ದಿಶಾ ಪಟಾನಿ ನೋಡುಗರ ಎದೆಯಲ್ಲಿ ಕಿಚ್ಚು ಹಚ್ಚುವ ಕಲೆಯನ್ನು ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಾರೆ. ಶುಕ್ರವಾರ ದಿಶಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರ ಇದಕ್ಕೆ ಹೊಸ ಉದಾಹರಣೆ.

ಸದ್ಯ ಮುಂಬೈನಲ್ಲಿರುವ ದಿಶಾ, ತಮ್ಮ ಮಾಲ್ಡೀವ್ಸ್ ಪ್ರವಾಸವನ್ನು ನೆನಪಿಸಿಕೊಂಡಿದ್ದಾರೆ. ಅಲ್ಲಿನ ಬೀಚ್‌ನಲ್ಲಿ ಸಮಯ ಕಳೆದ ಫೋಟೊವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ‘ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಆ ಪೋಸ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ನೀಲಿ ಮಿಶ್ರಿತ ಕೆಂಪು ಬಣ್ಣದ ಬಿಕಿನಿ ಧರಿಸಿ ದಿಶಾ ಕೊಟ್ಟಿರುವ ಭಾವಭಂಗಿಗಳು ನೋಡುಗರನ್ನು ಕ್ಷಣಕಾಲ ಹಿಡಿದು ನಿಲ್ಲಿಸುವಂತಿವೆ. ಸದ್ಯ ಈ ಫೋಟೊ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

ಇತ್ತೀಚೆಗೆ ದಿಶಾಳ ಹೆಸರು ನಟ ಟೈಗರ್ ಶ್ರಾಫ್ ಜತೆಗೆ ಕೇಳಿಬಂದಿತ್ತು. ಇಬ್ಬರೂ ಜತೆಯಾಗಿ ಮಾಲ್ಡೀವ್ಸ್‌ನ ಬೀಚ್‌ಗಳಲ್ಲಿ ಕಾಲ ಕಳೆದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.