ದೀಪಿಕಾ ಪಡುಕೋಣೆ
‘ಹಾಲಿವುಡ್ ವಾಕ್ ಆಫ್ ಫೇಮ್’ನಲ್ಲಿ ದೀಪಿಕಾ ಪಡುಕೋಣೆ ಅವರಿಗೆ ‘ಸ್ಟಾರ್’ ಗೌರವ ದಕ್ಕಲಿದೆ.
ವಿಶ್ವದಲ್ಲಿ ಛಾಪು ಮೂಡಿಸಿರುವ 35 ಜನಪ್ರಿಯ ತಾರೆಗಳಿಗೆ ಇಂತಹ ಗೌರವ ಸಲ್ಲಲಿದೆ. ‘ಹಾಲಿವುಡ್ ವಾಕ್ ಆಫ್ ಫೇಮ್ ಕ್ಲ್ಯಾಸ್ ಆಫ್ 2026’ ಮೋಷನ್ ಪಿಕ್ಚರ್ಸ್ ವಿಭಾಗಕ್ಕೆ ದೀಪಿಕಾ ಅವರ ಹೆಸರು ಕೂಡ ಆಯ್ಕೆಯಾಗಿದೆ. ಡೆಮಿ ಮೋರ್, ರಚೆಲ್ ಮೆಕ್ಆ್ಯಡಮ್ಸ್, ಎಮಿಲಿ ಬ್ಲಂಟ್ ಅವರಂತಹ ಘಟಾನುಘಟಿಗಳ ಜೊತೆಯಲ್ಲಿ ದೀಪಿಕಾ ಲಾಸ್ಏಂಜಲೀಸ್‌ನಲ್ಲಿ ಹೆಜ್ಜೆ ಹಾಕಲಿದ್ದಾರೆ.
ಇಂತಹ ಗೌರವ ಸಂದಿರುವ ಬಾಲಿವುಡ್‌ನ ಮೊದಲ ನಟಿ ದೀಪಿಕಾ. ಒಂದೂವರೆ ದಶಕದಿಂದ ಚಲನಚಿತ್ರಗಳಲ್ಲಿ ನಟಿಸುತ್ತಾ ಬಂದಿರುವ ಬೆಂಗಳೂರಿನ ಈ ನಟಿ, ಜನಪ್ರಿಯರಾದ ನಂತರವೂ ಪ್ರಯೋಗಶೀಲತೆಯನ್ನು ಉಳಿಸಿಕೊಂಡವರು. ಮಗುವಿಗೆ ತಾಯಿಯಾದ ನಂತರ ಅವರು ದಿನಕ್ಕೆ ಆರು ಗಂಟೆಯಷ್ಟೇ ಕೆಲಸ ಮಾಡುವಂತಹ ಯೋಜನೆಗಳನ್ನು ಒಪ್ಪಿಕೊಳ್ಳತೊಡಗಿದ್ದೂ ಸುದ್ದಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.