ಪ್ರಿಯಾಂಕಾ ಚೋಪ್ರಾ
ಬದುಕಿನಲ್ಲಿ ಸಿನಿಮಾ ಎಂದೊಡನೆ ಮೊದಲು ನೆನಪಾಗುವುದು ಯಾವುದು ಎನ್ನುವ ಪ್ರಶ್ನೆ ಅನೇಕರಿಗೆ ಎದುರಾಗುತ್ತಾ ಇರುತ್ತದೆ. ನಟಿ ಪ್ರಿಪ್ರಿಯಾಂಕಾ ಚೋಪ್ರಾ ಅವರಿಗೂ ಇಂಥದ್ದೊಂದು ಪ್ರಶ್ನೆ ಇತ್ತೀಚೆಗೆ ಎದುರಾಯಿತು. ಅದಕ್ಕೆ ಅವರು ಕೊಟ್ಟ ಉತ್ತರ ವಿವರವಾಗಿತ್ತು.
2000ನೇ ಇಸವಿಯಲ್ಲಿ ಮಿಸ್ ವರ್ಲ್ಡ್ ಕಿರೀಟ ಧರಿಸಿದ ಪ್ರಿಯಾಂಕಾ ಚೋಪ್ರಾ ನಟಿಯಾಗಿಯೂ ಚಿತ್ರರಂಗದಲ್ಲಿ ಛಾಪು ಮೂಡಿಸಿದವರು. ಈಗ ‘ಹೆಡ್ಸ್ ಆಫ್ ಸ್ಟೇಟ್’ ಸಿನಿಮಾ ಪ್ರಚಾರದಲ್ಲಿ ಅವರು ತೊಡಗಿದ್ದಾರೆ.
ಸಂಗೀತವನ್ನೇ ಹೆಚ್ಚಾಗಿ ಕೇಳುತ್ತಿದ್ದ ಕುಟುಂಬ ಅವರದ್ದು. ಹೀಗಾಗಿ, ಬಾಲಿವುಡ್ ಸಿನಿಮಾ ಹಾಡುಗಳನ್ನು ಕೇಳಿ ಕೇಳಿ ಅವರು ಗುನುಗುತ್ತಿದ್ದರಾದರೂ, ಸಿನಿಮಾ ನೋಡಿದ್ದು ಕಡಿಮೆಯೇ. ಅವರನ್ನು ಈಗಲೂ ಕಾಡುವ ಚಿತ್ರವೆಂದರೆ ಮಣಿರತ್ನಂ ನಿರ್ದೇಶನದ ‘ಬಾಂಬೆ’.
‘ನನಗೆ ಆಗಿನ್ನೂ ಹನ್ನೆರಡು ವರ್ಷ ವಯಸ್ಸಿರಬಹುದು, ಚಿತ್ರಮಂದಿರದಲ್ಲಿ ಬಾಂಬೆ ಸಿನಿಮಾ ನೋಡಿದೆ. ನಾನು ಊಹಿಸಲೂ ಸಾಧ್ಯವಿಲ್ಲದ ಸೂಕ್ಷ್ಮ ಜಗತ್ತಿನ ಅನಾವರಣ ಆ ಸಿನಿಮಾ ನೋಡಿದಾಗ ಆಗಿತ್ತು. ಸಿನಿಮಾ ಎಂಥ ಮ್ಯಾಜಿಕ್ ಎಂಬುದು ಗೊತ್ತಾದದ್ದೇ ಆಗ. ಆ ಚಿತ್ರವನ್ನು ಆನಂತರವೂ ಅನೇಕ ಸಲ ನೋಡಿದ್ದೇನೆ. ಹಾಗೆ ನೋಡಿದಾಗಲೆಲ್ಲ ನಾನು ಮೊದಲ ಬಾರಿಗೆ ನೋಡಿದಾಗ ಉಂಟಾಗಿದ್ದ ರೋಮಾಂಚನ ನೆನಪಿಗೆ ಬರುತ್ತದೆ’ ಎಂದು ಪ್ರಿಯಾಂಕಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.