ADVERTISEMENT

ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್‌ಗೆ ಕೋವಿಡ್-19 ದೃಢ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2022, 9:32 IST
Last Updated 3 ಜನವರಿ 2022, 9:32 IST
ಏಕ್ತಾ ಕಪೂರ್ (ಚಿತ್ರ: Facebook/EktaKapoor)
ಏಕ್ತಾ ಕಪೂರ್ (ಚಿತ್ರ: Facebook/EktaKapoor)   

ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ಸೋಂಕು ವೇಗವಾಗಿ ಹರಡುತ್ತಿದ್ದು, ಹಲವಾರು ಬಾಲಿವುಡ್ ಮತ್ತು ಕಿರುತೆರೆ ಸೆಲೆಬ್ರಿಟಿಗಳಿಗೆ ಸೋಂಕು ತಗುಲುತ್ತಿದೆ. ಅದರಂತೆ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಅವರಿಗೂ ಕೋವಿಡ್ ದೃಢಪಟ್ಟಿದೆ.

ಸದ್ಯ ಹೋಂ ಕ್ವಾರಂಟೈನ್‌ನಲ್ಲಿರುವ ಅವರು, ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಪರೀಕ್ಷೆಗೆ ಒಳಗಾಗಬೇಕು ಎಂದು ಸ್ನೇಹಿತರು ಮತ್ತು ಕುಟುಂಬಸ್ಥರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಇಂದು (ಜ.3) ಹೇಳಿಕೊಂಡಿರುವ ಅವರು, ನನಗೆ ಕೋವಿಡ್-19 ದೃಢಪಟ್ಟಿದೆ. ಕೋವಿಡ್ ಸಂಬಂಧಿತ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಪಾಸಿಟಿವ್ ಆಗಿದೆ. ನಾನೀಗ ಕ್ಷೇಮವಾಗಿದ್ದೇನೆ ಮತ್ತು ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ' ಎಂದಿದ್ದಾರೆ.

ADVERTISEMENT

ಏಕ್ತಾ ಕಪೂರ್‌ಗೆ ಸೋಂಕು ತಗುಲಿರುವ ವಿಷಯ ತಿಳಿಯುತ್ತಲೇ, ಅಭಿಮಾನಿಗಳು ಮತ್ತು ಸಿನಿಮಾ ರಂಗದ ಸ್ನೇಹಿತರು ಕಮೆಂಟ್ ಮಾಡಿದ್ದು, ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂದಿದ್ದಾರೆ. ನಿರ್ಮಾಪಕಿ ಗುನೀತ್ ಮೊಂಗಾ, ನಟಿ ಹೀನಾ ಖಾನ್ ಸೇರಿದಂತೆ ಹಲವರು ಏಕ್ತಾ ಕಪೂರ್ ಬೇಗ ಸುಧಾರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.