ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್
ಮುಂಬೈ: ‘ಭಾಯಿಜಾನ್’ ಎಂದೇ ಪ್ರಸಿದ್ಧರಾಗಿರುವ ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ಇಂದು 59ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಕೇಕ್ ಕತ್ತರಿಸುವ ಮೂಲಕ ಸಲ್ಲು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ನಟ ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೆ ನಟ ಸುನೀಲ್ ಶೆಟ್ಟಿ, ವೆಂಕಟೇಶ್ ದಗ್ಗುಬಾಟಿ, ಕ್ರಿಕೆಟಿಗ ಸುರೇಶ್ ರೈನಾ, ಹಲವು ಬಾಲಿವುಡ್‌ನ ಸ್ನೇಹಿತರು, ಅವರ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಇದಲ್ಲದೆ, ಸಲ್ಲು ಅಭಿಮಾನಿಗಳು ಕೇಕ್ ಕತ್ತರಿಸುವ ಮೂಲಕ ಅವರ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.
ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರು ನಟಿಸಿರುವ ಬಹು ನಿರೀಕ್ಷಿತ ಸಿಕಂದರ್ ಸಿನಿಮಾದ ಟೀಸರ್ ಇಂದು (ಗುರುವಾರ) ಬಿಡುಗಡೆಯಾಗಲು ನಿಗದಿಯಾಗಿತ್ತು. ಆದರೆ, ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಸಿನಿಮಾದ ಟೀಸರ್ ಬಿಡುಗಡೆಯನ್ನು ಚಿತ್ರ ನಿರ್ಮಾಪಕರು ಮುಂದೂಡಿದ್ದಾರೆ. ಸಿಕಂದರ್ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದಾರೆ.
ಸಿಕಂದರ್ ಸಿನಿಮಾದ ಟೀಸರ್ ನಾಳೆ (ಡಿಸೆಂಬರ್ 28) ಬೆಳಿಗ್ಗೆ 11.07 ಗಂಟೆಗೆ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಸಿನಿಮಾಗಳಲ್ಲದೆ, ಹಿಂದಿ ಬಿಗ್ ಬಾಸ್ ಶೋ ನಡೆಸಿಕೊಡುವ ಮೂಲಕ ನಟ ಸಲ್ಮಾನ್ ಖಾನ್ ಹೆಚ್ಚು ಜನಪ್ರಿಯರಾಗಿದ್ದು, ಅಪಾರ ಸಂಖ್ಯೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.