ADVERTISEMENT

ಬಿಡುಗಡೆಯಾಗಿ 1 ತಿಂಗಳಿಗೆ ಒಟಿಟಿಗೆ ಬಂತು ಡಾರ್ಲಿಂಗ್‌ ಕೃಷ್ಣ ನಟನೆಯ ‘ಬ್ರ್ಯಾಟ್‌’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ನವೆಂಬರ್ 2025, 10:50 IST
Last Updated 28 ನವೆಂಬರ್ 2025, 10:50 IST
<div class="paragraphs"><p>ನಟ ಡಾರ್ಲಿಂಗ್ ಕೃಷ್ಣ</p></div>

ನಟ ಡಾರ್ಲಿಂಗ್ ಕೃಷ್ಣ

   

ಚಿತ್ರ: ಎಕ್ಸ್ ಖಾತೆ

ನಟ ಡಾರ್ಲಿಂಗ್ ಕೃಷ್ಣ ಅಭಿನಯದ 'ಬ್ರ್ಯಾಟ್' ಸಿನಿಮಾ ಇಂದು (ಶುಕ್ರವಾರ) ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಅಕ್ಟೋಬರ್ 31ಕ್ಕೆ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಬ್ರ್ಯಾಟ್ ಸಿನಿಮಾ 1 ತಿಂಗಳ ಬಳಿಕ ಅಮೆಜಾನ್ ಪ್ರೈಮ್‌ಗೆ ಎಂಟ್ರಿ ಕೊಟ್ಟಿದೆ.

ADVERTISEMENT

ಈ ಕುರಿತು ಖುದ್ದು ನಿರ್ದೇಶಕ ಶಶಾಂಕ್‌ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಚಿತ್ರಮಂದಿರಗಳಲ್ಲಿ ಬ್ರ್ಯಾಟ್ ಬಸ್ಟರ್ ಇನಿಂಗ್ಸ್ ನಂತರ ಒಟಿಟಿಯಲ್ಲಿ ‌ತನ್ನ ಇನಿಂಗ್ಸ್ ಅನ್ನು ಪ್ರಾರಂಭಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿತ್ತು. 'ಕಾಂತಾರ ಅಧ್ಯಾಯ 1ರ ಬಳಿಕ ಶಶಾಂಕ್ ನಿರ್ದೇಶನದ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈಗ ಪ್ರೇಕ್ಷಕರು ಅಮೆಜಾನ್ ಪ್ರೈಮ್‌ನಲ್ಲಿ ಬ್ರ್ಯಾಟ್ ಸಿನಿಮಾವನ್ನು ನೋಡಬಹುದಾಗಿದೆ.

‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದ ಬಳಿಕ ನಿರ್ದೇಶಕ ಶಶಾಂಕ್‌ ಹಾಗೂ ನಟ ಡಾರ್ಲಿಂಗ್‌ ಕೃಷ್ಣ ‘ಬ್ರ್ಯಾಟ್‌’ ಎಂಬ ಪ್ಯಾನ್‌ ಇಂಡಿಯಾ ಚಿತ್ರದ ಮೂಲಕ ಪ್ರೇಕ್ಷಕರ ಎದುರಿಗೆ ಬಂದಿದ್ದರು. ಈ ಸಿನಿಮಾ ಅ.31ಕ್ಕೆ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು. ಈ ಸಿನಿಮಾದಲ್ಲಿ ಡಾರ್ಲಿಂಗ್‌ ಕೃಷ್ಣ, ಮನಿಶಾ ಕಂದಕೂರ್‌, ಅಚ್ಯುತ್‌ ಕುಮಾರ್‌, ರಮೇಶ್‌ ಇಂದಿರಾ, ಡ್ರ್ಯಾಗನ್‌ ಮಂಜು ಮತ್ತಿತರರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.