ಮನಿಶಾ, ಡಾರ್ಲಿಂಗ್ ಕೃಷ್ಣ
‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದ ಬಳಿಕ ನಿರ್ದೇಶಕ ಶಶಾಂಕ್ ಹಾಗೂ ನಟ ಡಾರ್ಲಿಂಗ್ ಕೃಷ್ಣ ‘ಬ್ರ್ಯಾಟ್’ ಎಂಬ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಪ್ರೇಕ್ಷಕರೆದುರಿಗೆ ಬರಲಿದ್ದಾರೆ. ಸಿನಿಮಾದ ರಿಲೀಸ್ ದಿನಾಂಕ ಘೋಷಣೆಯಾಗಿದ್ದು, ಅ.31ಕ್ಕೆ ಸಿನಿಮಾ ತೆರೆಕಾಣಲಿದೆ.
‘ಫಸ್ಟ್ ರ‍್ಯಾಂಕ್ ರಾಜು’ ಸಿನಿಮಾ ನಿರ್ಮಾಣ ಮಾಡಿದ್ದ ಮಂಜುನಾಥ್ ಕಂದಕೂರ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಮೂಡಿಬರಲಿದೆ. ಟೀಸರ್ ಹಾಗೂ ಎರಡು ಹಾಡುಗಳ ಮೂಲಕ ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದೆ. ಅತಿ ಹೆಚ್ಚು ತರಲೆ ಮಾಡುವ ಹುಡುಗರನ್ನು ‘ಬ್ರ್ಯಾಟ್’ ಎನ್ನುತ್ತಾರೆ. ನಿರ್ದೇಶಕ ಶಶಾಂಕ್ ಈವರೆಗೂ ಮಾಡಿರದ ಜಾನರ್‌ನಲ್ಲಿ ಈ ಸಿನಿಮಾವಿರಲಿದ್ದು, ಅಪ್ಪ-ಮಗನ ಸಂಘರ್ಷವನ್ನು ಕಥೆ ಹೊಂದಿದೆ. ಅಪ್ಪನಿಗೆ ಮಗನೇ ‘ಬ್ರ್ಯಾಟ್’. ಅಪ್ಪನ ಪಾತ್ರದಲ್ಲಿ ನಟ ಅಚ್ಯುತ್ ಕುಮಾರ್ ನಟಿಸಿದ್ದು, ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ಮುಂತಾದವರು ತಾರಾಬಳಗದಲ್ಲಿದ್ದಾರೆ.
ಚಿತ್ರದಲ್ಲಿ ನಾಯಕಿಯಾಗಿ ಮನಿಶಾ ಕಂದಕೂರ್ ನಟಿಸಿದ್ದು, ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಲಾಷ್ ಕಲ್ಲತ್ತಿ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.