ADVERTISEMENT

‘ಬೈಟು ಲವ್‌’ ಸಿನಿಮಾ ಬಿಡುಗಡೆ 18ಕ್ಕೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 11:14 IST
Last Updated 16 ಫೆಬ್ರುವರಿ 2022, 11:14 IST
ಬೈ ಟು ಲವ್‌ ಚಿತ್ರದ ಪೋಸ್ಟರ್‌
ಬೈ ಟು ಲವ್‌ ಚಿತ್ರದ ಪೋಸ್ಟರ್‌   

ಪ್ರೇಮ ಕಥೆ ಆಧಾರಿತ ‘ಬೈಟು ಲವ್‌’ ಕನ್ನಡ ಸಿನಿಮಾ ಫೆಬ್ರುವರಿ 18ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಚಿತ್ರದಲ್ಲಿ ಧನ್ವೀರ್‌ ನಾಯಕ , ಶ್ರೀಲೀಲಾ ನಾಯಕಿ. ಟೀಸರ್‌, ಟ್ರೇಲರ್‌ ಹಾಗೂ ನಾಯಕ, ನಾಯಕಿಯರ ತುಂಟ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ಪಡೆದಿವೆ. ಮೆಚ್ಚುಗೆಗೂ ಪಾತ್ರವಾಗಿವೆ.

‘ಹುಡುಗ–ಹುಡುಗಿಯ ಸುತ್ತಲಿನ ಸಾಮಾನ್ಯ ಲವ್‌ ಸ್ಟೋರಿಗಿಂತ ನಮ್ಮ ಸಿನಿಮಾದ ಕಥೆ ವಿಭಿನ್ನವಾಗಿದೆ. ಪ್ರೀತಿಸಿ ಮದುವೆಯಾದ ಬಳಿಕ ಇಬ್ಬರೂ ತಮ್ಮ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ತೋರಿಸಿದ್ದೇವೆ. ಚಿತ್ರದಲ್ಲಿ ನಾನು ದಾವಣಗೆರೆಯ ಹುಡುಗ. ನಾಯಕಿಯು ಮಂಗಳೂರಿನ ಹುಡುಗಿ. ಚಿತ್ರದಲ್ಲಿ ಐದು ಹಾಡುಗಳಿವೆ. ಇದು ನನ್ನ ಎರಡನೇ ಸಿನಿಮಾ’ ಎಂದರು ಧನ್ವೀರ್‌.

ADVERTISEMENT

‘ಸಂಬಂಧಗಳನ್ನು ಹೇಗೆ ಉಳಿಸಿಕೊಂಡು ಹೋಗಬೇಕು ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದೇವೆ. ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು. ಸಿನಿಮಾದ ಕಥೆಯನ್ನು ಕೇಳಿದ ತಕ್ಷಣ ನನ್ನ ತಾಯಿಗೂ ಇಷ್ಟವಾಗಿತ್ತು. ಇದು ನನ್ನ ಮೂರನೇ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ಅಭಿನಯಿಸಿರುವುದು ಹೊಸ ಅನುಭವನ್ನು ನೀಡಿದೆ’ ಎಂದು ಶ್ರೀಲೀಲಾ ಹೇಳಿದರು.

ಕೆ.ವಿ.ಎನ್‌. ಪ್ರೊಡಕ್ಷನ್‌ ಬ್ಯಾನರ್‌ ಅಡಿ ಸಿನಿಮಾ ನಿರ್ಮಿಸಲಾಗಿದೆ. ಮಹೇನ್‌ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ, ಯೋಗಾನಂದ್‌ ಸಂಭಾಷಣೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.