ADVERTISEMENT

ಡ್ರಗ್ ಮಾಫಿಯಾ: ಸ್ಯಾಂಡಲ್‌ವುಡ್ ನಟಿ ಸಂಜನಾ ಗರ್ಲಾನಿ ಮನೆ ಮೇಲೆ ಸಿಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 2:48 IST
Last Updated 8 ಸೆಪ್ಟೆಂಬರ್ 2020, 2:48 IST
ರಾಹುಲ್ ಜೊತೆಯಲ್ಲಿ ನಟಿ ಸಂಜನಾ
ರಾಹುಲ್ ಜೊತೆಯಲ್ಲಿ ನಟಿ ಸಂಜನಾ   

ಬೆಂಗಳೂರು: ಡ್ರಗ್ ಮಾಫಿಯಾ ಸಂಬಂಧ ನಟಿ ಸಂಜನಾ ಗರ್ಲಾನಿ ಅವರ ಮನೆ ಮೇಲೆ ಮಂಗಳವಾರ ಬೆಳಿಗ್ಗೆಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

ಮಾಫಿಯಾದಲ್ಲಿ ಭಾಗಿಯಾಗಿದ್ದ ಆರೋಪದಡಿ ಸಂಜನಾ ಗರ್ಲಾನಿ ಸ್ನೇಹಿತ ರಾಹುಲ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಡ್ರಗ್ ಸೇವನೆ ಮಾಡುತ್ತಿದ್ದ ರಾಹುಲ್, ತನ್ನದೇ ತಂಡ ಕಟ್ಟಿಕೊಂಡು ಡ್ರಗ್ ಸರಬರಾಜು ಸಹ ಮಾಡುತ್ತಿದ್ದ. ಅದಕ್ಕೆ ಹಲವರು ಸಹಕಾರ ನೀಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

ADVERTISEMENT

ಬಂಧಿತ ಆರೋಪಿ ರಾಹುಲ್‌ ಜೊತೆಯಲ್ಲಿ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದನಟಿ ಸಂಜನಾ ಅವರೂ ಕೂಡ ಪ್ರಕರಣದಲ್ಲಿ ಭಾಗಯಾಗಿರುವ ಸಾಧ್ಯತೆ ಇದೆ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.