ADVERTISEMENT

ಮೇ 9ಕ್ಕೆ ‘ಸೂತ್ರಧಾರಿ’ ತೆರೆಗೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 22:12 IST
Last Updated 17 ಏಪ್ರಿಲ್ 2025, 22:12 IST
ಅಪೂರ್ವ, ಚಂದನ್‌ ಶೆಟ್ಟಿ 
ಅಪೂರ್ವ, ಚಂದನ್‌ ಶೆಟ್ಟಿ    

ಚಂದನ್‌ ಶೆಟ್ಟಿ ಹಾಗೂ ಅಪೂರ್ವ ನಟಿಸಿರುವ ‘ಸೂತ್ರಧಾರಿ’ ಸಿನಿಮಾ ಮೇ 9ರಂದು ತೆರೆಕಾಣಲಿದ್ದು, ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯು ‘ಯು/ಎ’ ಪ್ರಮಾಣಪತ್ರ ನೀಡಿದೆ. 

ನವರಸನ್ ತಮ್ಮ ಈಗಲ್ ಮೀಡಿಯಾ ಕ್ರಿಯೇಷನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ನವರಸನ್ ನಿರ್ಮಾಣದ ಐದನೇ ಚಿತ್ರವಾಗಿದೆ. ‘ಡ್ಯಾಶ್‌’ ಹಾಗೂ ‘ಟ್ರೆಂಡಿಂಗ್‌ನಲ್ಲಿ ಬರ್ಬೇಕು ಅಂದ್ರೆ ಏನ್ ಮಾಡ್ಬೇಕು’ ಎಂಬ ಎರಡು ಹಾಡುಗಳನ್ನು ಈಗಾಗಲೇ ಚಿತ್ರತಂಡ ಬಿಡುಗಡೆ ಮಾಡಿದೆ. ಚಂದನ್ ಶೆಟ್ಟಿ ಅವರೇ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಚಂದನ್‌ ಅಂಡರ್‌ಕವರ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಪಿ.ಕೆ.ಎಚ್ ದಾಸ್ ಛಾಯಾಚಿತ್ರಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ ಹಾಗೂ ಮೋಹನ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ನಟಿ ಸಂಜನಾ ಆನಂದ್ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ತಬಲನಾಣಿ, ಪ್ರಶಾಂತ್ ನಟನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT