ADVERTISEMENT

ಚಂದ್ರಮುಖಿ– 2 ಸಿನಿಮಾದ ಪೋಸ್ಟರ್‌ ಬಿಡುಗಡೆ: ವೆಟ್ಟೈಯನ್ ರಾಜಾನ ಪಾತ್ರದಲ್ಲಿ ರಾಘವ

ಐಎಎನ್ಎಸ್
Published 31 ಜುಲೈ 2023, 12:45 IST
Last Updated 31 ಜುಲೈ 2023, 12:45 IST
ಚಂದ್ರಮುಖಿ– 2 ಸಿನಿಮಾದ ಪೋಸ್ಟರ್‌
ಚಂದ್ರಮುಖಿ– 2 ಸಿನಿಮಾದ ಪೋಸ್ಟರ್‌   

ಮುಂಬೈ: ‘ಚಂದ್ರಮುಖಿ– 2‘ ಸಿನಿಮಾದ ಮೊದಲ ಪೋಸ್ಟರ್‌ ಅನ್ನು ಚಿತ್ರತಂಡ ಇಂದು (ಸೋಮವಾರ) ಬಿಡುಗಡೆ ಮಾಡಿದೆ.

2005ರಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ವೆಟ್ಟೈಯನ್ ರಾಜಾನ ಪಾತ್ರದಲ್ಲಿ ಅಭಿಯಿಸಿದ್ದರು. ಇದೀಗ ಚಂದ್ರಮುಖಿ– 2ರಲ್ಲಿ ವೆಟ್ಟೈಯನ್ ರಾಜಾನ ಪಾತ್ರದಲ್ಲಿ ನಟ ರಾಘವ ಲಾರೆನ್ಸ್ ಕಾಣಿಸಿಕೊಳ್ಳಲಿದ್ದಾರೆ.

ಲೈಕಾ ನಿರ್ಮಾಣ ಸಂಸ್ಥೆಯು ರಾಘವ ಪಾತ್ರದ ಮೊದಲ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿ, ಇದೀಗ ಮರಳಿ ಅದೇ ಅವತಾರದಲ್ಲಿ ವೆಟ್ಟೈಯನ್ ರಾಜಾನ ಆಗಮನ ಎಂದು ಬರೆದುಕೊಂಡಿದೆ.

ADVERTISEMENT

ನಟ ರಾಘವ ಅವರು ರಜನಿಕಾಂತ್‌ ಅವರಿಗೆ ಈ ಪಾತ್ರ ನಿಭಾಯಿಸಲು ಪ್ರೋತ್ಸಾಹ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಬಾಲಿವುಡ್‌ ನಟಿ ಕಂಗನಾ ರನೌತ್ ಅವರು ಅಭಿನಯಿಸಿದ್ದಾರೆ. ಪಿ. ವಾಸು ನಿರ್ದೇಶಿಸಿರುವ ‘ಚಂದ್ರಮುಖಿ– 2‘ ಇದೇ ಸೆಪ್ಟೆಂಬರ್‌ 19ರಂದು ಗಣೇಶ ಹಬ್ಬಕ್ಕೆ ಹಿಂದಿ, ತೆಲುಗು, ಕನ್ನಡ, ಸೇರಿದಂತೆ ತಮಿಳು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.

ಪಿ. ವಾಸು ನಿರ್ದೇಶನದ ಚಂದ್ರಮುಖಿ ಚಿತ್ರವು 2005ರ ತಮಿಳಿನಲ್ಲಿ ಮೂಡಿಬಂದ ಹಾಸ್ಯಭರಿತ ಭಯಾನಕ ಕಥೆ ಹಂದರ ಹೊಂದಿತ್ತು. ಈ ಚಿತ್ರವು ಕನ್ನಡದ ‘ಆಪ್ತಮಿತ್ರ‘ ಸಿನಿಮಾದ ಅಧಿಕೃತ ರಿಮೇಕ್ ಆಗಿತ್ತು. ಚಿತ್ರದಲ್ಲಿ ರಜನಿಕಾಂತ್, ಜ್ಯೋತಿಕಾ, ಪ್ರಭು, ವಡಿವೇಲು ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.