ADVERTISEMENT

₹400 ಕೋಟಿ ಗಳಿಸಿದ ‘ಛಾವಾ’

ಪಿಟಿಐ
Published 24 ಫೆಬ್ರುವರಿ 2025, 10:11 IST
Last Updated 24 ಫೆಬ್ರುವರಿ 2025, 10:11 IST
<div class="paragraphs"><p>ನಟ ವಿಕ್ಕಿ ಕೌಶಲ್ ಅಭಿನಯದ&nbsp;‘ಛಾವಾ’ ಚಿತ್ರ</p></div>

ನಟ ವಿಕ್ಕಿ ಕೌಶಲ್ ಅಭಿನಯದ ‘ಛಾವಾ’ ಚಿತ್ರ

   

ನವದೆಹಲಿ: ವಿಕ್ಕಿ ಕೌಶಲ್‌, ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಗಲ್ಲಾ ಪೆಟ್ಟಿಗೆಯಲ್ಲಿ ₹400 ಕೋಟಿ ಗಳಿಕೆ ಮಾಡಿದೆ ಎಂದು ಚಿತ್ರತಂಡ ಹೇಳಿದೆ. 

ಈ ಮೂಲಕ 2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಹಿಂದಿ ಚಿತ್ರ ಎನ್ನುವ ಹೆಗ್ಗಳಿಕೆಗೆ ಛಾವಾ ಪಾತ್ರವಾಗಿದೆ.

ADVERTISEMENT

ಛತ್ರಪತಿ ಸಂಭಾಜಿ ಮಹಾರಾಜ್‌ ಅವರ ಕಥಾಹಂದರದ ಚಿತ್ರದಲ್ಲಿ ಸಂಭಾಜಿ ಪಾತ್ರದಲ್ಲಿ ವಿಕ್ಕಿ ಕೌಶಲ್‌ ಮತ್ತು ಆತನ ಪತ್ಮಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

ಲಕ್ಷ್ಮಣ್‌ ಉತ್ತೇಕರ್‌ ನಿರ್ದೇಶನದಲ್ಲಿ ಚಿತ್ರ ನಿರ್ಮಾಣವಾಗಿದೆ.

ಈ ಹಿಂದೆ ವಿಕ್ಕಿ ಕೌಶಲ್‌ ನಟನೆಯ ರೊಮ್ಯಾಂಟಿಕ್‌ ಕಾಮಿಡಿ ಚಿತ್ರ ‘ಜರಾ ಹಕ್ತೆ ಜರಾ ಬಚ್ಕೆ’ ಚಿತ್ರದಲ್ಲಿ ವಿಕ್ಕಿ ಮತ್ತು ಉತ್ತೇಕರ್‌ ಜೊತೆಯಾಗಿದ್ದರು. ಈ ಚಿತ್ರ ಈಗ ಜಿಯೊ ಸ್ಟಾರ್‌ ಒಟಿಟಿಯಲ್ಲಿ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.