ADVERTISEMENT

ಸಿನಿ ತಾರೆಯರು ಮೆಚ್ಚಿದ ‘ಓ ಮೈ ಲವ್’ ಆಲ್ಬಂ ಸಾಂಗ್‌

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 12:49 IST
Last Updated 16 ಡಿಸೆಂಬರ್ 2020, 12:49 IST
ಓ ಮೈ ಲವ್‌ ವಿಡಿಯೊ ಆಲ್ಬಂನಲ್ಲಿ ಆರಾಧನಾ ಭಟ್‍ ನಿಟ್ಟೋಡಿ ಮತ್ತು ತುಷಾರ್‌ ಗೌಡ
ಓ ಮೈ ಲವ್‌ ವಿಡಿಯೊ ಆಲ್ಬಂನಲ್ಲಿ ಆರಾಧನಾ ಭಟ್‍ ನಿಟ್ಟೋಡಿ ಮತ್ತು ತುಷಾರ್‌ ಗೌಡ   

‘ಡ್ರಾಮಾ ಜ್ಯೂನಿಯರ್ಸ್’ ಖ್ಯಾತಿಯ ತುಷಾರ್‌ಗೌಡ ನಾಯಕನಾಗಿ ಮತ್ತು ‘ಮಜಾಭಾರತ’ ಖ್ಯಾತಿಯ ಆರಾಧನಾ ಭಟ್‍ ನಿಟ್ಟೋಡಿ ನಾಯಕಿಯಾಗಿ ಕಾಣಿಸಿಕೊಂಡಿರುವ ‘ಓ ಮೈ ಲವ್’ ವಿಡಿಯೊ ಆಲ್ಬಂ ಸಾಂಗ್‌ ಬಿಡುಗಡೆಗೆ ಸಿದ್ಧಗೊಂಡಿದೆ.

ಈ ಹಾಡಿನ ಪರಿಕಲ್ಪನೆ, ಸಾಹಿತ್ಯ ಹಾಗೂ ನಿರ್ದೇಶನ ಹಲವು ಚಿತ್ರಗಳಿಗೆ ದುಡಿದಿರುವ ಜೀವನ್‍ ಗಂಗಾಧರಯ್ಯ ಅವರದು.

ಆಧುನಿಕತೆಯ ಜೀವನದಲ್ಲಿ ಮಾನವ ಸಂಬಂಧಗಳು ವಹಿಸುತ್ತಿರುವ ಪಾತ್ರ, ಮಕ್ಕಳು ಮತ್ತು ಪೋಷಕರ ನಡುವಿನ ಸಂಬಂಧದಲ್ಲಿನ ಸಿಹಿ, ಕಹಿ ಕ್ಷಣಗಳು, ಯೌವ್ವನದಲ್ಲಿ ಹೊಸತನ್ನು ಕಂಡುಕೊಳ್ಳುವ ಸಮಯದಲ್ಲಿ ಎದುರುಗೊಳ್ಳುವ ವಿವಿಧ ಸನ್ನಿವೇಶಗಳನ್ನು ಈ ಹಾಡು ನೆನಪಿಸಲಿದೆ ಎನ್ನುತ್ತಾರೆ ಜೀವನ್‌ ಗಂಗಾಧರಯ್ಯ.

ADVERTISEMENT

ಈ ಹಾಡನ್ನು ರಾಷ್ಟ್ರ ಪ್ರಶಸ್ತಿ ಪುರಷ್ಕೃತ ನಿರ್ದೇಶಕ ಪಿ.ಶೇಷಾದ್ರಿ, ಗಾಯಕಿ ಅನುರಾಧಾ ಭಟ್, ‘ಬೆಲ್‍ಬಾಟಂ’ ಚಿತ್ರದ ನಿರ್ಮಾಪಕ ಸಂತೋಷ್‍ಕುಮಾರ್, ‘ಕೆಜಿಎಫ್‍’ಚಿತ್ರಕ್ಕೆ ಸಂಭಾಷಣೆ ಬರೆದಿರುವ ಚಂದ್ರಮೌಳಿ, ನಟಿ ಪ್ರಿಯಾಂಕ ತಿಮ್ಮೇಶ್ ಮುಂತಾದವರು ಮೆಚ್ಚಿ ಪ್ರಶಂಸಿಸಿದ್ದಾರೆ ಎನ್ನುತ್ತಾರೆ ಅವರು.

ಸಂಗೀತ ಜಿತಿನ್‍ ದರ್ಶನ್, ಸತ್ಯರಾಧಾಕೃಷ್ಣ, ಛಾಯಾಗ್ರಹಣ ರಾಜರಾವ್‍ ಅಂಚಲ್‍ಕರ್, ಸಂಕಲನ ಅಕ್ಷಯ್ ಪಿ.ರಾವ್, ನೃತ್ಯ ತೀಚು ಆಚಾರ್ಯ ಅವರದು. ಶಂಕರಣ್ಣ ಸ್ಟುಡಿಯೊ,ಪ್ರಭಾಕರ್ ಬಿ.ಪಿ. ಹಾಗೂ ರಂಗಮಯೂರಿ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.