ADVERTISEMENT

‘ವಿದ್ಯಾಪತಿ’ಗೆ ಜೋಡಿಯಾದ ಮಲೈಕಾ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 22:30 IST
Last Updated 29 ಫೆಬ್ರುವರಿ 2024, 22:30 IST
<div class="paragraphs"><p>ಮಲೈಕಾ&nbsp;ಟಿ. ವಸುಪಾಲ್</p></div>

ಮಲೈಕಾ ಟಿ. ವಸುಪಾಲ್

   

ಚಿಕ್ಕಣ್ಣ ನಾಯಕರಾಗಿ ನಟಿಸಿರುವ ಚೊಚ್ಚಲ ಚಿತ್ರ ‘ಉಪಾಧ್ಯಕ್ಷ’ದ ಮೂಲಕ ತಮ್ಮ ಚಂದನವನದ ಪಯಣ ಆರಂಭಿಸಿದ್ದ ಮಲೈಕಾ ಟಿ. ವಸುಪಾಲ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. 

‌ಕಿರುತೆರೆಯಲ್ಲಿ ‘ಹಿಟ್ಲರ್‌ ಕಲ್ಯಾಣ’ ಎಂಬ ಧಾರಾವಾಹಿಯಲ್ಲಿ ಮಿಂಚಿದ ದಾವಣಗೆರೆಯ ಮಲೈಕಾ ಇದೀಗ, ‘ಇಕ್ಕಟ್‌’, ‘ಟಗರುಪಲ್ಯ’ ಸಿನಿಮಾ ಖ್ಯಾತಿಯ ನಾಗಭೂಷಣ್‌ ನಟನೆಯ ‘ವಿದ್ಯಾಪತಿ’ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣಹಚ್ಚಲಿದ್ದಾರೆ. ಸಿನಿಮಾದಲ್ಲಿ ಮಲೈಕಾ ‘ವಿದ್ಯಾ’ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ಸರಳ ವ್ಯಕ್ತಿತ್ವದ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ‘ಡಾಲಿ’ ಧನಂಜಯ ತಮ್ಮ ಡಾಲಿ ಪಿಕ್ಚರ್ಸ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕರಾಟೆ ಕಿಂಗ್‌ ಆಗಿ ನಾಗಭೂಷಣ್‌ ಕಾಣಿಸಿಕೊಳ್ಳಲಿದ್ದಾರೆ. ‘ವಿದ್ಯಾಪತಿ’ ಡಾಲಿ ಪಿಕ್ಚರ್ಸ್‌ನ 4ನೇ ಸಿನಿಮಾವಾಗಿದ್ದು, ಈ ಹಿಂದೆ ನಾಗಭೂಷಣ್‌ ನಟನೆಯ ‘ಇಕ್ಕಟ್‌’ ಸಿನಿಮಾ ನಿರ್ದೇಶಿಸಿದ್ದ ಇಶಾಂ ಖಾನ್‌ ಹಾಗೂ ಹಸೀಂ ಖಾನ್‌ ಅವರೇ ಇದರ ಸಾರಥಿಗಳಾಗಿದ್ದಾರೆ. ಈ ಚಿತ್ರದ ಸಂಕಲನದ ಜವಾಬ್ದಾರಿಯನ್ನೂ ಅವರು ಹೊತ್ತುಕೊಂಡಿದ್ದಾರೆ.

ADVERTISEMENT

ಆ್ಯಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ‘ವಿದ್ಯಾಪತಿ’ ಚಿತ್ರಕ್ಕೆ ಲವಿತ್ ಛಾಯಾಚಿತ್ರಗ್ರಹಣವಿದೆ. ಇದೇ ತಿಂಗಳು ಸಿನಿಮಾದ ಚಿತ್ರೀಕರಣದಲ್ಲಿ ಮಲೈಕಾ ಭಾಗಿಯಾಗಲಿದ್ದಾರೆ ಎಂದಿದೆ ಚಿತ್ರತಂಡ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.