ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಲಾಂಛನ
‘ಪ್ರಜಾವಾಣಿ’ ಪತ್ರಿಕೆಗೆ 75 ವರ್ಷ ತುಂಬಿದ ಸಂದರ್ಭದಲ್ಲಿ, ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂಲಕ ಪತ್ರಿಕೆ ಹಾಗೂ ಕನ್ನಡ ಸಿನಿಮಾ ನಂಟಿಗೆ ಹೊಸ ಆಯಾಮ ದೊರಕಿತು. 2023ರ ಜೂನ್ 3ರಂದು ಬೆಂಗಳೂರಿನಲ್ಲಿ ನಡೆದ ‘ಸಿನಿ ಸಮ್ಮಾನ’ದ ಚೊಚ್ಚಲ ಆವೃತ್ತಿಯಲ್ಲಿ 2022ರಲ್ಲಿ ತೆರೆಕಂಡ ಕನ್ನಡ ಚಿತ್ರಗಳನ್ನು ಪರಿಗಣಿಸಿ, ಅವುಗಳಲ್ಲಿನ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು.
ಈ ವರ್ಷ ನಡೆಯಲಿರುವ ಎರಡನೇ ಆವೃತ್ತಿಗೆ 2023ರಲ್ಲಿ ತೆರೆಕಂಡ ಸಿನಿಮಾಗಳನ್ನು ಪರಿಗಣಿಸಲಾಗಿದ್ದು, ನೂರಕ್ಕೂ ಅಧಿಕ ಸಿನಿಮಾಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ. ಈ ಸಿನಿಮಾಗಳನ್ನು ಇದೀಗ 21 ತಾಂತ್ರಿಕ ತೀರ್ಪುಗಾರರಿಗೆ ಹಂಚಲಾಗಿದೆ. ಈ ಸಂದರ್ಭದಲ್ಲಿ ಆಡಿಟ್ ಪಾರ್ಟ್‌ನರ್ ಆಗಿ ‘ಇವೈ’ ಸಂಸ್ಥೆ ಜೊತೆಯಾಗಿದೆ. ತಾಂತ್ರಿಕ ತೀರ್ಪುಗಾರರ ಮಂಡಳಿಯಲ್ಲಿ ಸಿನಿಮಾ ರಂಗದಲ್ಲಿ ಅಪಾರ ಅನುಭವ ಹೊಂದಿರುವವರಿದ್ದು, ಇವರು ಸಿನಿಮಾಗಳನ್ನು ವೀಕ್ಷಿಸಿ ಎರಡು ವಿಭಾಗದಲ್ಲಿರುವ 19 ಪ್ರಶಸ್ತಿಗಳಿಗೆ ತಲಾ 5 ನಾಮನಿರ್ದೇಶನಗಳನ್ನು ನೀಡಲಿದ್ದಾರೆ. ಈ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಈ ಹಂತದಲ್ಲಿ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ತಾಂತ್ರಿಕ ತೀರ್ಪುಗಾರರನ್ನು ಪರಿಚಯಿಸುವ ಸಮಯ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.