
ನಟ ದುನಿಯಾ ವಿಜಯ್
ಚಿತ್ರ: ಎಕ್ಸ್ ಖಾತೆ
ನಟ ದುನಿಯಾ ವಿಜಯ್ ನಿರ್ದೇಶನದಲ್ಲಿ ‘ಸಿಟಿ ಲೈಟ್ಸ್’ ಸಿನಿಮಾ ಮೂಡಿಬರುತ್ತಿದೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಅವರ ಎರಡನೇ ಮಗಳು ಮೋನಿಷಾ ವಿಜಯ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೋನಿಷಾ ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರದ ದೃಶ್ಯವೊಂದನ್ನು ಬೀದಿಯಲ್ಲೇ ಚಿತ್ರೀಕರಣ ಮಾಡಲಾಗಿದೆ.
‘ಸಲಗ’, ‘ಭೀಮ’ ಬಳಿಕ ದುನಿಯಾ ವಿಜಯ್ ‘ಸಿಟಿ ಲೈಟ್ಸ್’ ಸಿನಿಮಾ ನಿರ್ದೇಶನದಲ್ಲಿ ಸಕ್ರಿಯರಾಗಿದ್ದಾರೆ. ಇದೇ ಚಿತ್ರದ ದೃಶ್ಯ ಒಂದನ್ನು ನಟ ದುನಿಯಾ ವಿಜಯ್ ನೈಜವಾಗಿ ಬೀದಿಯಲ್ಲಿ ಚಿತ್ರೀಕರಣ ಮಾಡಿದ್ದಾರೆ. ಅದೇ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅದರಲ್ಲಿ ಮಹಿಳೆಯೊಬ್ಬರು ಡ್ಯಾನ್ಸ್ ಮಾಡುತ್ತಿದ್ದು, ನಟ ದುನಿಯಾ ವಿಜಯ್ ಹಾಗೂ ಸಿನಿಮಾ ತಂಡ ಖುಷಿಯಿಂದ ಆಕ್ಷನ್ ಕಟ್ ಕೇಳಿದ್ದಾರೆ. ಇನ್ನು, ಈ ಸಿನಿಮಾದಲ್ಲಿ ವಿನಯ್ ರಾಜಕುಮಾರ್ ಹಾಗೂ ಮೋನಿಷಾ ವಿಜಯ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಇದೀಗ ‘ಸಿಟಿ ಲೈಟ್ಸ್’ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದ್ದು, ಈ ಸಿನಿಮಾ ಮೂಲಕ ಮತ್ತೊಂದು ದೊಡ್ಡ ಸಂದೇಶ ನೀಡುವ ಸೂಚನೆ ಕೊಡುತ್ತಿದ್ದಾರೆ. ಸದ್ಯ ಬೀದಿಯಲ್ಲಿ ನಿಂತು ವಿಜಯ್ ಚಿತ್ರೀಕರಣ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.