ADVERTISEMENT

ಆರ್‌ಆರ್‌ಆರ್ ಚಿತ್ರದ ಪೋಸ್ಟರ್ ಸರಿಪಡಿಸಿ, ಪೋಸ್ಟ್ ಮಾಡಿದ ಟ್ರಾಫಿಕ್ ಪೊಲೀಸ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜೂನ್ 2021, 5:42 IST
Last Updated 30 ಜೂನ್ 2021, 5:42 IST
ಮಂಗಳವಾರವಷ್ಟೇ ಆರ್‌ಆರ್‌ಆರ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿತ್ತು..
ಮಂಗಳವಾರವಷ್ಟೇ ಆರ್‌ಆರ್‌ಆರ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿತ್ತು..   

ಬೆಂಗಳೂರು: ಎಸ್. ಎಸ್. ರಾಜಮೌಳಿ ಟೀಮ್‌ನ ಬಹುನಿರೀಕ್ಷಿತ ಆರ್‌ಆರ್‌ಆರ್ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಹೀಗಾಗಿ ಚಿತ್ರತಂಡ ಮಂಗಳವಾರ ಹೊಸ ಪೋಸ್ಟರ್ ಒಂದನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿತ್ತು.

ಆದರೆ ಆರ್‌ಆರ್‌ಆರ್ ಚಿತ್ರದ ಪೋಸ್ಟರ್‌ನಲ್ಲಿ ಒಂದು ಸಮಸ್ಯೆಯಿದೆ ಎಂದು ಮನಗಂಡ ಸೈಬರಾಬಾದ್ ಟ್ರಾಫಿಕ್ ಪೊಲೀಸರು, ಅದನ್ನು ಸರಿಪಡಿಸಿ, ಮತ್ತೆ ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಆರ್‌ಆರ್‌ಆರ್ ಚಿತ್ರದ ಪೋಸ್ಟರ್‌ನಲ್ಲಿ ಜ್ಯೂನಿಯರ್ ಎನ್‌ಟಿಆರ್ ಬೈಕ್ ಚಲಾಯಿಸುತ್ತಿದ್ದರೆ, ನಟ ರಾಮ್ ಚರಣ್ ಅವರ ಹಿಂಬದಿ ಸವಾರನಾಗಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸದೆಯೇ ವೇಗವಾಗಿ ಸಾಗುತ್ತಿರುವ ಚಿತ್ರವನ್ನು ಪೋಸ್ಟರ್‌ನಲ್ಲಿ ಪ್ರಕಟಿಸಲಾಗಿತ್ತು.

ADVERTISEMENT

ಇದನ್ನು ಗಮನಿಸಿದ ಸೈಬರಾಬಾದ್ ಟ್ರಾಫಿಕ್ ಪೊಲೀಸ್, ಚಿತ್ರದಲ್ಲಿರುವ ಜ್ಯೂ. ಎನ್‌ಟಿಆರ್ ಮತ್ತು ರಾಮ್ ಚರಣ್‌ ಹೆಲ್ಮೆಟ್ ಧರಿಸಿ, ಬೈಕ್ ಚಲಾಯಿಸುವಂತೆ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ.

ಸಂಚಾರಿ ನಿಯಮಗಳು ಮತ್ತು ರಸ್ತೆ ಸುರಕ್ಷತೆ ಕ್ರಮ ಪಾಲನೆಗೆ ಈ ಪೋಸ್ಟರ್ ಅನ್ನು ಟ್ರಾಫಿಕ್ ಪೊಲೀಸರು ಬಳಸಿಕೊಂಡಿದ್ದಾರೆ.

ಅಲ್ಲದೆ, ಟ್ರಾಫಿಕ್ ಪೊಲೀಸರ ಪೋಸ್ಟ್‌ಗೆ ಆರ್‌ಆರ್‌ಆರ್ ಚಿತ್ರತಂಡ ಕೂಡ ಪ್ರತಿಕ್ರಿಯೆ ನೀಡಿದ್ದು, ಇನ್ನೂ ಪೂರ್ಣಗೊಂಡಿಲ್ಲ, ಚಿತ್ರದಲ್ಲಿರುವ ಬೈಕ್‌ಗೆ ನಂಬರ್ ಪ್ಲೇಟ್ ಇಲ್ಲ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.