ADVERTISEMENT

ಡೆವಿಲ್‌ ರಿಲೀಸ್: ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ – ವಿಡಿಯೊ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2025, 3:10 IST
Last Updated 11 ಡಿಸೆಂಬರ್ 2025, 3:10 IST
   

ನಟ ದರ್ಶನ್‌ ತೂಗುದೀಪ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಡೆವಿಲ್’ ಇಂದು (ಗುರುವಾರ) ಬಿಡುಗಡೆಯಾಗಿದೆ.

ಮುಂಜಾನೆ 6.30ರಿಂದಲೇ ಶೋಗಳು ಪ್ರಾರಂಭವಾಗಿದ್ದು, ಚಿತ್ರಮಂದಿರಗಳು ಅಭಿಮಾನಿಗಳಿಂದ ಕಿಕ್ಕಿರಿದಿದೆ. ದರ್ಶನ್‌ ಪೋಸ್ಟರ್‌ಗಳನ್ನು ಹಿಡಿದು ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ದರ್ಶನ್‌ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್, ದರ್ಶನ್ ಆಪ್ತ ಧನ್ವೀರ್ ಸೇರಿದಂತೆ ಹಲವರು ಚಿತ್ರ ವೀಕ್ಷಿಸಿದ್ದಾರೆ.

ADVERTISEMENT

ದರ್ಶನ್‌ ಹಿಂದಿನ ಚಿತ್ರ ‘ಕಾಟೇರ’ 2023ರ ಡಿಸೆಂಬರ್‌ನಲ್ಲಿ ತೆರೆ ಕಂಡು ಯಶಸ್ವಿಯಾಗಿತ್ತು. ಅದೇ ರೀತಿ ಈ ಸಿನಿಮಾವನ್ನು ಗೆಲ್ಲಿಸಬೇಕೆಂದು ಚಿತ್ರತಂಡ ದರ್ಶನ್‌ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದೆ.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌, ಚಿತ್ರವನ್ನು ಗೆಲ್ಲಿಸಿಕೊಡುವಂತೆ ಅಭಿಮಾನಿಗಳಿಗೆ ಅಲ್ಲಿಂದಲೇ ಸಂದೇಶ ಕಳುಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.