ADVERTISEMENT

ಥಾಯ್ಲೆಂಡ್‌ನಲ್ಲಿ ನಟ ದರ್ಶನ್: ಡೆವಿಲ್ ಚಿತ್ರೀಕರಣದ ತೆರೆ ಹಿಂದಿನ ಚಿತ್ರಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಡಿಸೆಂಬರ್ 2025, 6:27 IST
Last Updated 20 ಡಿಸೆಂಬರ್ 2025, 6:27 IST
<div class="paragraphs"><p>ಡೆವಿಲ್ ಚಿತ್ರೀಕರಣ ತೆರೆ ಹಿಂದಿನ ಚಿತ್ರಗಳು</p></div>

ಡೆವಿಲ್ ಚಿತ್ರೀಕರಣ ತೆರೆ ಹಿಂದಿನ ಚಿತ್ರಗಳು

   

ಚಿತ್ರ: ಇನ್‌ಸ್ಟಾಗ್ರಾಂ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ರಾಜ್ಯಾದ್ಯಂತ ಡಿಸೆಂಬರ್ 11ರಂದು (ಗುರುವಾರ) ಬಿಡುಗಡೆಯಾಗಿ. ಉತ್ತಮ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ನೆಚ್ಚಿನ ನಟನನ್ನು ಏಕಪರದೆ ಮೇಲೆ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಡೆವಿಲ್ ಚಿತ್ರೀಕರಣ ತೆರೆ ಹಿಂದಿನ ಚಿತ್ರಗಳು

ನಟ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದರು. ಬಳಿಕ ಅವರು ಜಾಮೀನಿನ ಮೇಲೆ ಹೊರಬಂದು ಡೆವಿಲ್‌ ಸಿನಿಮಾವನ್ನು ಥೈಲ್ಯಾಂಡ್ ಸೇರಿದಂತೆ ಇತರೆ ಸ್ಥಳಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ್ದರು. ಇದೀಗ ಅವರ ಜಾಮೀನು ರದ್ದಾಗಿದ್ದು ಮತ್ತೊಮ್ಮೆ ಜೈಲು ಸೇರಿದ್ದಾರೆ.

ಡೆವಿಲ್ ಚಿತ್ರೀಕರಣ ತೆರೆ ಹಿಂದಿನ ಚಿತ್ರಗಳು

ಡೆವಿಲ್‌ ಸಿನಿಮಾದ ಕೆಲವು ದೃಶ್ಯಗಳನ್ನು ಥಾಯ್ಲೆಂಡ್‌ನಲ್ಲಿ ಚಿತ್ರೀಕರಿಸಲಾಗಿತ್ತು. ಇದೀಗ ನಟ ದರ್ಶನ್ ಥಾಯ್ಲೆಂಡ್‌ನಲ್ಲಿ ಡೆವಿಲ್‌ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಡೆವಿಲ್ ಚಿತ್ರೀಕರಣ ತೆರೆ ಹಿಂದಿನ ಚಿತ್ರಗಳು

ಇದೇ ಫೋಟೊಗಳನ್ನು ಡೆವಿಲ್ ನಿರ್ಮಾಣ ಸಂಸ್ಥೆ ಶ್ರೀ ಜೈಮಾತಾ ಕಂಬೈನ್ಸ್ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ತಮಗೆ ಸಿಕ್ಕಿರುವ ಸಮಯದಲ್ಲಿಯೇ ನಿರ್ದೇಶಕ ಪ್ರಕಾಶ್‌ ವೀರ್‌ ಅವರು ಥಾಯ್ಲೆಂಡ್‌ಗೆ ಹೋಗಿ ಚಿತ್ರೀಕರಣವನ್ನು ಮುಗಿಸಿದ್ದರು. ಅಲ್ಲದೇ ‘ಒಂದೆ ಒಂದು ಸಲ’ ಥಾಯ್ಲೆಂಡ್‌ನಲ್ಲಿ ಚಿತ್ರೀಕರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.