
ನಟ ದರ್ಶನ್
ಬೆಂಗಳೂರು: ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾ ರಾಜ್ಯಾದ್ಯಂತ ಡಿ.11ರಂದು (ಗುರುವಾರ) ಬಿಡುಗಡೆಯಾಗಿತ್ತು. ಡೆವಿಲ್ ಸಿನಿಮಾ ಕಣ್ತುಂಬಿಕೊಂಡ ಪ್ರೇಕ್ಷಕರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಸಿನಿಮಾ ಬಿಡುಗಡೆ ಆದ ಮೊದಲ ದಿನ ನಿರೀಕ್ಷೆಗೂ ಮೀರಿದ ಓಪನಿಂಗ್ ಸಿಕ್ಕಿದ್ದು, ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಆಗಿದ್ದವು. ಹೀಗಾಗಿ ದಿ ಡೆವಿಲ್ ಮೊದಲ ದಿನದ ಕಲೆಕ್ಷನ್ ಎಷ್ಟಾಗಬಹುದು ಎಂಬ ಕುತೂಹಲ ಮನೆಮಾಡಿತ್ತು.
ನಟ ದರ್ಶನ್
ಇದೀಗ ಡೆವಿಲ್ ಸಿನಿಮಾದ ಮೊದಲ ದಿನ ಕಲೆಕ್ಷನ್ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೊದಲ ದಿನವೇ ಅಧಿಕ ಗಳಿಕೆ ಮಾಡುವ ಮೂಲಕ ನಟ ದರ್ಶನ್ ಹೊಸ ದಾಖಲೆ ಮಾಡಿದ್ದಾರೆ. ದಿ ಡೆವಿಲ್ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ₹13.8 ಕೋಟಿ ರೂಪಾಯಿ ಗಳಿಸಿದೆ ಅಂತ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
ಇನ್ನು, ಸಿನಿಮಾದಲ್ಲಿ ದರ್ಶನ್ ಅವರು ಧನುಷ್ ಹಾಗೂ ಕೃಷ್ಣ ಎಂಬ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡೂ ಪಾತ್ರಗಳು ತದ್ವಿರುದ್ಧವಾಗಿವೆ. ಇದರಲ್ಲಿ ನಟ ದರ್ಶನ್ ಡೈಲಾಗ್, ಸ್ಟೈಲ್ ಎಲ್ಲವೂ ಅಭಿಮಾನಿಗಳ ಗಮನ ಸೆಳೆದಿದೆ.