ADVERTISEMENT

ಡೆವಿಲ್ ಚಿತ್ರೀಕರಣ ನಡೆದಿದ್ದು ಹೇಗೆ? ನಿರ್ದೇಶಕ ಮಿಲನ ಪ್ರಕಾಶ್ ಬಿಚ್ಚಿಟ್ರು ಸತ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಡಿಸೆಂಬರ್ 2025, 11:33 IST
Last Updated 3 ಡಿಸೆಂಬರ್ 2025, 11:33 IST
<div class="paragraphs"><p>ನಟ ದರ್ಶನ್, ನಿರ್ದೇಶಕ ಮಿಲನ ಪ್ರಕಾಶ್‌&nbsp;</p></div>

ನಟ ದರ್ಶನ್, ನಿರ್ದೇಶಕ ಮಿಲನ ಪ್ರಕಾಶ್‌ 

   

ನಟ ದರ್ಶನ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ದಿ ಡೆವಿಲ್‌’ ಇದೇ ಡಿಸೆಂಬರ್‌ 11ರಂದು ಬಿಡುಗಡೆಯಾಗಲಿದೆ. ದರ್ಶನ್‌ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲುಪಾಲಾಗಿದ್ದು, ಅವರ ಅನುಪಸ್ಥಿತಿಯಲ್ಲಿ ಚಿತ್ರದ ಪ್ರಮೋಷನ್‌ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿವೆ.

ಈ ನಡುವೆ ಡೆವಿಲ್‌ ಸಿನಿಮಾ ಮತ್ತು ನಟ ದರ್ಶನ್‌ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರ ಬಗ್ಗೆ ನಿರ್ದೇಶಕ ಮಿಲನ ಪ್ರಕಾಶ್‌ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ. ‘ಅಷ್ಟೊಂದು ಬೆನ್ನು ನೋವಿನಲ್ಲೂ ಚಿತ್ರೀಕರಣದಲ್ಲಿ ಖುಷಿಯಿಂದ ಭಾಗಿಯಾಗಿದ್ದರು. ಅಕ್ಟೋಬರ್‌ನಲ್ಲೆ ಸಿನಿಮಾ ಬಿಡುಗಡೆ ಮಾಡಿ ಅಂತ ಕೇಳಿಕೊಂಡರು. ಆದರೆ ನಾವೇ ಕೊಂಚ ತಡಮಾಡಿದ್ದೆವು. ದರ್ಶನ್ ಅಭಿಮಾನಿಗಳು ತುಂಬಾ ಬೆಂಬಲ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ಅವರು ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ. ಅವರು ನಮ್ಮ ತಂಡಕ್ಕೆ ಆಧಾರ ಸ್ತಂಭವಾಗಿ ನಿಂತುಕೊಂಡಿದ್ದರು’ ಎಂದು ಹೇಳಿದ್ದಾರೆ.

ADVERTISEMENT

ಈಗಾಗಲೇ ಡೆವಿಲ್‌ ಸಿನಿಮಾದ ಮೂರು ಹಾಡುಗಳು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಮಿಲನಾ ಪ್ರಕಾಶ್ ಅವರ ನಿರ್ದೇಶನದಲ್ಲಿ ದಿ ಡೆವಿಲ್‌ ಸಿನಿಮಾ ಮೂಡಿ ಬರುತ್ತಿದೆ. ಈ ಸಿನಿಮಾದಲ್ಲಿ ದರ್ಶನ್, ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.