
ದರ್ಶನ್ ಪತ್ನಿ ವಿಜಯಲಕ್ಷ್ಮೀ
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲೂ ನಟ, ನಟಿಯರಿಗೆ ಇದರ ಕಿರುಕುಳ ಹೆಚ್ಚು. ಇದೀಗ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಕಿಡಿಗೇಡಿಗಳು ಅಶ್ಲೀಲ ಕಾಮೆಂಟ್ ಹಾಗೂ ಪೋಸ್ಟ್ ಹಾಕಿ ವಿಕೃತಿ ಮೆರೆದಿದ್ದಾರೆ. ಈ ಕುರಿತು ವಿಜಯಲಕ್ಷ್ಮಿ ಅವರು ನಾನು ‘ಮೌನವಾಗಿ ಕುಳಿತುಕೊಂಡಿದ್ದೇನೆ ಎಂದುಕೊಳ್ಳಬೇಡಿ’ ಎಂದು ಕಿಡಿಕಾರಿದ್ದಾರೆ.
ಅಶ್ಲೀಲವಾಗಿ ಕಾಮೆಂಟ್ ಹಾಗೂ ಪೋಸ್ಟ್ ಹಾಕಿದವರ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ಅವರು ದೂರು ದಾಖಲಿಸಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಾಣಿಸಿಕೊಂಡಿರುವ ಪೋಸ್ಟ್ ಹಾಗೂ ಕಾಮೆಂಟ್‌ಗಳ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸೈಬರ್ ಪೊಲೀಸರಿಗೆ ದೂರು ನೀಡಿರುವ ಬಗ್ಗೆಯೂ ಎಚ್ಚರಿಕೆ ಕೊಟ್ಟಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮೀ ಇನ್‌ಸ್ಟಾಗ್ರಾಂ ಸ್ಟೋರಿ
ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೋಸ್ಟ್‌ನಲ್ಲಿ ಹೇಳಿದಿಷ್ಟು
‘ನಿಮ್ಮ ಕೆಟ್ಟ ಮನಸ್ಥಿತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಕ್ಕಾಗಿ ಎಲ್ಲಾ ವರ್ಗದ ಅಭಿಮಾನಿಗಳಿಗೆ ಧನ್ಯವಾದಗಳು. ಅಶ್ಲೀಲ ಪೋಸ್ಟ್ ಹಾಗೂ ಕಾಮೆಂಟ್ ಹಾಕಿದ ಖಾತೆಗಳ ವಿರುದ್ಧ ದೂರು ದಾಖಲಾಗಿವೆ. ಅಶ್ಲೀಲ ಪದ ಬಳಸುವ, ನಡವಳಿಕೆ ಮತ್ತು ಸಭ್ಯತೆಯನ್ನು ಬದಿಗಿಟ್ಟ ಯುವತಿಯರಿಗೆ ಮತ್ತು ಪುರುಷರಿಗೆ ವಿಶೇಷ ಚಪ್ಪಾಳೆ. ನಾನು ಮೌನವಾಗಿ ಕುಳಿತುಕೊಂಡಿದ್ದೇನೆ ಅಂದುಕೊಳ್ಳಬೇಡಿ. ದೇವರು ನಿಮ್ಮನ್ನು ಆಶೀರ್ವದಿಸಲಿ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.